ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು ಮೂಲಸೌಕರ್ಯ: ಐಟಿಗಳ ಬೇಸರ  Search similar articles
ಬೆಂಗಳೂರು: ಬೆಂಗಳೂರಿನ ಅಭಿವೃದ್ದಿ ವೇಗ ಕುಂಠಿತವಾಗಿರುವ ಬಗ್ಗೆ ಐಟಿ ಮಂದಿ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಇನ್ಫೋಸಿಸ್‌ನ ಮೋಹನ್ ಪೈ ಅವರು, ದಿನೇದಿನೇ ಬೆಂಗಳೂರಿನ ಮೂಲಸೌಕರ್ಯ ಹದಗೆಡುತ್ತಿದೆ. ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ. ಆದರೆ ಸರಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮತ್ತು ಐಟಿ ಕಂಪನಿಗಳಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಅದು ನಗರದಿಂದ ದೂರದಲ್ಲಿರುವುದೇ ವಿಳಂಬಕ್ಕೆ ಕಾರಣ. ಇದೇ ಅಭಿಪ್ರಾಯ ಜನಸಾಮಾನ್ಯರದ್ದೂ ಕೂಡ. ದೇವನಹಳ್ಳಿಗೆ ತಲುಪಲು ರಸ್ತೆ ಇದ್ದರೂ ಅಲ್ಲೂ ಟ್ರಾಫಿಕ್‌ನದ್ದೆ ಸಮಸ್ಯೆ. ಹಾಗಾಗಿ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

ನಗರದ ರಿಂಗ್ ರಸ್ತೆಗಳ ಸುಧಾರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಪೈ ಒತ್ತಾಯಿಸಿದ್ದಾರೆ.
ಮತ್ತಷ್ಟು
ಇಂದೇ ಖಾತೆ ಹಂಚಿಕೆ: ಯಡಿಯೂರಪ್ಪ ಘೋಷಣೆ
41 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಸರಕಾರ ವಜಾಕ್ಕೆ ಕಾಂಗ್ರೆಸ್ ಆಗ್ರಹ
ಬಿಜೆಪಿಯಿಂದ ಖಾತೆ ಹಂಚಿಕೆ ಕಸರತ್ತು
ಛಲ ಬಿಡದ ಎಚ್.ಕೆ: ಕಾರವಾರದ ಮೇಲೆ ಕಣ್ಣು!
ಆಸ್ಪತ್ರೆ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ