ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿದ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಜೈಪ್ರಕಾಶ್ ಮತ್ತು ಸೂಪರಿಂಟೆಂಡೆಂಟ್ ಇಂಜಿನಿಯರ್ ರವೀಂದ್ರ ಬಾಬುರವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಬಿಎಂಆರ್‌ಸಿಎಲ್ ಮುಖ್ಯ ಇಂಜಿನಿಯರ್ ಜೈಪ್ರಕಾಶ್ ಮತ್ತು ಲೋಕೋಪಯೋಗಿ ಇಲಾಖೆ ಸೂಪರಿಂಡೆಂಟ್ ಇಂಜಿನಿಯರ್ ರವೀಂದ್ರಬಾಬು ಹಣ ದುರುಪಯೋಗ ಮಾಡಿರುವುದು ಬೆಳಕಿಗೆ ಬಂದಿದ್ದರಿಂದ ಸರಕಾರ ಈ ಕ್ರಮ ಕೈಗೊಂಡಿದೆ.
ಕಟ್ಟಡ ಪೂರ್ಣ ಸ್ವಾಧೀನವಾಗುವ ಮುನ್ನವೇ ಬಡ್ಡಿರಹಿತವಾಗಿ ಹಣ ಮಂಜೂರು ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಆರೋಪದ ಮೇಲೆ ಇವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ರಾಮನಗರದ ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ಆರಂಭದಲ್ಲೇ ಸಮಸ್ಯೆಗಳ ಸರಮಾಲೆ ಸುತ್ತಿಕೊಳ್ಳಲಾರಂಭಿಸಿದೆ. ಈ ಎಲ್ಲ ಅಡತಡೆಗಳನ್ನು ನಿವಾರಿಸಿಕೊಂಡು ವಿವಿ ಯಾವಾಗ ಸ್ಥಾಪನೆಯಾಗುತ್ತದೆ ಎಂಬ ಗುಮಾನಿ ಹುಟ್ಟಿಕೊಂಡಿದೆ.
|