ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಮೂವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಇತರ ಸದಸ್ಯರ ಖಾತೆಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಸಚಿವರ ಹೆಚ್ಚುವರಿ ಖಾತೆಗಳನ್ನು ವಾಪಾಸ್ ಪಡೆದು ನೂತನ ಸಚಿವರಿಗೆ ಹಂಚಿಕೆ ಮಾಡಲಾಗಿದೆ.
ಕಾನೂನು ಸಂಸದೀಯ ಸಚಿವ ಸುರೇಶ್ ಕುಮಾರ್ ಹೊಂದಿದ್ದ ಪೌರಾಡಳಿತ ಖಾತೆಯನ್ನು ನೂತನ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಲಾಗಿದೆ. ಜತೆಗೆ ಸಾರ್ವಜನಿಕ ಉದ್ಯಮ ಖಾತೆಯನ್ನೂ ಅವರಿಗೆ ವಹಿಸಲಾಗಿದೆ.
ಹಾಗೆಯೇ ಬಂದರು ಮತ್ತು ಸಣ್ಣ ಉಳಿತಾಯ ಸಚಿವ ಕೃಷ್ಣ ಪಾಲೇಮಾರ್ ಹೊಂದಿದ್ದ ಮೀನುಗಾರಿಕೆ ಖಾತೆಯನ್ನು ಆನಂದ್ ಅಸ್ನೋಟಿಕರ್‌ಗೆ ನೀಡಲಾಗಿದ್ದು, ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೊಂದಿದ್ದ ವಿಜ್ಞಾನ-ತಂತ್ರಜ್ಞಾನ ಖಾತೆಯನ್ನು ಇವರಿಗೆ ವಹಿಸಲಾಗಿದೆ. ಇದರಿಂದ ಸಚಿವ ಕೃಷ್ಣ ಪಾಲೇಮಾರ್ ಅವರಿಗೆ ಬಂದರು ಜತೆಗೆ ಒಳಸಾರಿಗೆ, ಪರಿಸರ ಮತ್ತು ಜೀವಶಾಸ್ತ್ರ ಖಾತೆಯನ್ನು ನೀಡಲಾಗಿದೆ.
ಶಿವನಗೌಡ ಪಾಟೀಲ್ ಅವರಿಗೆ ಸಮೂಹ ಶಿಕ್ಷಣ ಹಾಗೂ ಗ್ರಂಥಾಲಯ ಖಾತೆಯನ್ನು ನೀಡಲಾಗಿದೆ. ಈ ಖಾತೆಯನ್ನು ಸಚಿವ ಗೋವಿಂದ ಕಾರಜೋಳ ಅವರು ಹೊಂದಿದ್ದರು.
|