ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದ್ವಿತೀಯ ರಾಜಧಾನಿ: ಜೆಡಿಎಸ್ ಆಕ್ರೋಶ  Search similar articles
ಬೆಳಗಾವಿ ಜಿಲ್ಲೆಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡುವ ನಿರ್ಧಾರದಿಂದ ಹೊರ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರಮದ ಬಗ್ಗೆ ಜೆಡಿಎಸ್ ನಾಯಕರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಾದ್ಯಂತ ಸರಕಾರದ ವಿರುದ್ಧ ಜೆಡಿಎಸ್ ತೀವ್ರ ತೆರನಾದ ಹೋರಾಟ ನಡೆಸಲಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತಾ, ಬೆಳಗಾಂನಲ್ಲಿ ಅಧಿವೇಶನ ನಡೆಸುವುದಾಗಿ ಈ ಮೊದಲು ಹೇಳಿದ್ದರು. ಆದರೆ ಈಗ ಅದನ್ನು ಪಾಲಿಸದೆ ಗಡಿನಾಡ ಕನ್ನಡಿಗರಿಗೆ ಅನ್ಯಾಯವೆಸಗಿದ್ದಾರೆ ಎಂದು ತಿಳಿಸಿದರು.

ಇತ್ತೀಚೆಗೆ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ಪ್ರಶ್ನೆಯೇ ಇಲ್ಲ. ಈ ನಗರದ ಸರ್ವಾಂಗೀಣ ಅಭಿವೃದ್ದಿಗೆ ಸರಕಾರ ಬದ್ಧವಾಗಿದೆ ಎಂದು ತಿಳಿಸಿದ್ದರು. ಇದರಿಂದ ಜೆಡಿಎಸ್ ಅಸಮಾಧಾನಗೊಂಡಿದೆ.
ಮತ್ತಷ್ಟು
ಪುತ್ರನ ಹಾದಿಯಲ್ಲಿ ಅಪ್ಪ ಜಾಲಪ್ಪ
ಉಚಿತ ವಿದ್ಯುತ್: 17ರ ತನಕ ಕಾದು ನೋಡಿ
ಗಣಿಧಣಿಗಳ ಕಡಿವಾಣಕ್ಕೆ ರಾಷ್ಟ್ರೀಕರಣ ಮದ್ದು: ಗೌಡ
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ: ಸಿಎಂ
ರೈತರಿಗೆ ಉಚಿತ ವಿದ್ಯುತ್
ಸಿದ್ಧರಾಮಯ್ಯರಿಗೆ ಬಿಜೆಪಿ ಗಾಳ