ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಲು ದರ ಏರಿಕೆ ಬಜೆಟ್‌ನಲ್ಲಿ ಪ್ರಸ್ತಾವನೆ: ಡಿವಿಎಸ್  Search similar articles
ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಬೆಂಬಲವಾಗಿ ಹಾಲಿನ ದರ ಏರಿಕೆ ಬಗ್ಗೆ ಸರಕಾರ ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೊಷಿಸಿರುವ ವಿಚಾರಗಳನ್ನು ಹಂತಹಂತವಾಗಿ ಜಾರಿಗೆ ತರಲಿದೆ. ಹೈನುಗಾರಿಕೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಾಲಿನ ದರವನ್ನು ಏರಿಸುವುದು ಸರಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಾಲಿಗೆ ಸೂಕ್ತ ಬೆಲೆಯನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗುವುದು ಎಂದು ಹೇಳಿದರು.

ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವವರಿಗಾಗಿ ಮುಖಂಡರು ಒಂದಿಷ್ಟು ನೋವು ತುಂಬಿದ್ದರೂ, ತ್ಯಾಗ ಮನೋಭಾವವನ್ನು ಪಕ್ಷದ ಮಂದಿ ಹೊಂದಿದ್ದಾರೆ ಎಂದು ಶ್ಲಾಘಿಸಿದ ಅವರು, ಬಿಜೆಪಿ ಯಾರನ್ನೂ ತಾಂಬೂಲು ನೀಡಿ ಕರೆದಿಲ್ಲ. ಪಕ್ಷದ ಸಿದ್ಧಾಂತ ನೀತಿಗೆ ಒಪ್ಪಿ ಅವರು ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವ್ಯಾಪಿಸಿರುವ ಚಿಕೂನ್‌‌ಗುನ್ಯಾದ ಕುರಿತು ಮಾತನಾಡಿದ ಅವರು, ಚಿಕೂನ್‌‌ಗುನ್ಯಾದಿಂದ ಬಳಲಿರುವ ರೈತರಿಗೆ 500 ಮೆಟ್ರಿಕ್ ಟನ್ ಅಕ್ಕಿ ನೀಡಲಾಗಿದ್ದು, ಇನ್ನೂ ಹೆಚ್ಚಿನ ಸಹಾಯವನ್ನು ದೊರಕಿಸಿಕೊಡಲಾಗುವುದು ಎಂಬ ಆಶ್ವಾಸನೆ ನೀಡಿದರು.
ಮತ್ತಷ್ಟು
ರಸಗೊಬ್ಬರ: ಮತ್ತೆ ಪ್ರತಿಭಟನೆಗಿಳಿದ ರೈತರು
ಐಸಿಐಸಿಐ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ
ಯುಪಿಎಗೆ ಬೆಂಬಲ: ಗೊಂದಲದಲ್ಲಿ ದೇವೇಗೌಡರು
ಬಿಜೆಪಿಯನ್ನು ಟೀಕಿಸುವ ಹಕ್ಕು ಕಾಂಗ್ರೆಸ್ಸಿಗಿಲ್ಲ: ನಾಯ್ಡು
ಭಾಷಾ ಮಾಧ್ಯಮ: ಸುಪ್ರಿಂಕೋರ್ಟ್ ಮೇಲ್ಮನವಿ ವಿಳಂಬ
ಹಣದ ಮೇಲೆ ಬಿಜೆಪಿ ಅಧಿಕಾರ: ಖರ್ಗೆ