ಒಂದೇ ಕುಟುಂಬದ ನಾಲ್ವರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಸಿಂಧಗಿ ತಾಲೂಕಿನ ಹಂಚನಾಳದಲ್ಲಿ ಸೋಮವಾರ ಸಂಭವಿಸಿದೆ.
ಹಂಚನಾಳದ ತೋಟದ ಮನೆಯಲ್ಲಿ ವಾಸವಾಗಿರುವ ಬಸವರಾಜ ಸಿದ್ಧಪ್ಪ ಬಿರಾದಾರ, ಬಸಮ್ಮ ಬಸವರಾಜ ಬಿರಾದಾರ, ಸಂತೋಷ್ ಹಾಗೂ ಮಹೇಶ್ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಸವಿತಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ, ಸವಿತಾ ತನ್ನ ತಂದೆಯೇ ತಾಯಿ ಹಾಗೂ ಸಹೋದರರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದರೂ, ಮತ್ತೆ ಮಾತು ಬದಲಾಯಿಸಿ ಸವಿತಾ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಮನೆಗೆ ಬಂದು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದು ವಾಸ್ತವಾಂಶ ಏನೆಂದು ಇನ್ನಷ್ಟೆ ತಿಳಿಯಬೇಕಿದೆ.
ಅಲ್ಲದೆ, ಸವಿತಾಳ ತಂದೆ ಬಸವರಾಜ ಬಿರಾದಾರ ಆರ್ಥಿಕವಾಗಿ ಸಬಲರಾಗಿದ್ದು, ಈ ಕೃತ್ಯ ಎಸಲಾರರು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ಈ ನಡುವೆ ಸವಿತಾಳಿಗೆ ಅದೇ ಗ್ರಾಮದ ಯುವಕನೊಂದಿಗೆ ಸಂಬಂಧ ಇದೆ ಎಂದು ಹೇಳಲಾಗಿದ್ದು, ಇದೇ ಈ ಕೊಲೆಗಳಿಗೆ ಕಾರಣವಾಗಿದೆ ಎಂದೂ ಹೇಳಲಾಗುತ್ತಿದೆ.
ಈ ಎರಡು ಹೇಳಿಕೆಯಿಂದ ಗೊಂದಲಕ್ಕೀಡಾಗಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಯ ಪತ್ತೆಗೆ ಪ್ರಯತ್ನ ನಡೆಸುತ್ತಿದ್ದಾರೆ.
|