ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಬ್ಬು ಬೆಳೆಗೆ ಪ್ರೋತ್ಸಾಹ ಧನ : ಮಾತುಕತೆ ವಿಫಲ  Search similar articles
ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹಧನ ನೀಡುವ ಕುರಿತು ಕಬ್ಬು ಬೆಳಗಾರರು ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಸರಕಾರ ನಡೆಸಿದ ಮಾತುಕತೆ ವಿಫಲವಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳಗಾರರಿಗೆ ಪ್ರೋತ್ಸಾಹ ಧನವನ್ನು ಕಾರ್ಖಾನೆ ಮಾಲೀಕರೇ ನೀಡಬೇಕೆಂದು ಮುಖ್ಯಮಂತ್ರಿ ಪಟ್ಟು ಹಿಡಿದಿದ್ದರಿಂದ ಸಭೆಯಲ್ಲಿ ಯಾವುದೇ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಒಪ್ಪಂದ ಮಾಡಿಕೊಂಡಂತೆ 160 ರೂ.ಗಳನ್ನು ನೀಡಬೇಕು. ಒಂದು ವೇಳೆ ನೀಡದಿದ್ದರೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.

ಕಬ್ಬು ಬೆಳೆಗಾರರಿಗೆ ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಈಗಾಗಲೇ ಖರೀದಿ ತೆರಿಗೆಯಲ್ಲಿ ಪ್ರತಿ ಟನ್‌ಗೆ 60ರೂ. ವಿನಾಯಿತಿ ನೀಡಲಾಗಿದೆ. ಸಾಗಾಣಿಕೆ ವೆಚ್ಚ ನೀಡುತ್ತಿದೆ. ಅಲ್ಲದೆ, ನುರಿಸಿದ ಕಬ್ಬಿಗೆ ಪ್ರತಿ ಟನ್‌ಗೆ 100ರೂ.ಗಳನ್ನು ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಆದರೆ ಮುಖ್ಯಮಂತ್ರಿ ಮಾತಿನಿಂದ ಅಸಮಾಧಾನಗೊಂಡ ಕಾರ್ಖಾನೆ ಮಾಲೀಕರು ಯಾವುದೇ ಕಾರಣಕ್ಕೂ ಕಬ್ಬು ಬೆಳೆಗಾರರಿಗೆ 160ರೂ.ಗಳನ್ನು ಕಾರ್ಖಾನೆ ನೀಡುವುದು ಅಸಾಧ್ಯದ ಮಾತು. ಸರಕಾರವೇ ಈ ಪ್ರೋತ್ಸಾಹಧನವನ್ನು ನೀಡಬೇಕೆಂದು ಆಗ್ರಹಿಸಿದರು. ಇದರಿಂದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರದೆ ಸಭೆ ಮುಕ್ತಾಯಗೊಂಡಿತು.
ಮತ್ತಷ್ಟು
ಕಲ್ಲಿದ್ದಲು ಕೊರತೆ: ಕೇಂದ್ರಕ್ಕೆ ರಾಜ್ಯ ನಿಯೋಗ
17ರಂದು ಚೊಚ್ಚಲ ಬಜೆಟ್ ಮಂಡನೆ
ಬಿಜಾಪುರ: ನಾಲ್ವರ ಬರ್ಬರ ಹತ್ಯೆ
ಕಬ್ಬು ಬೆಳೆಗಾರರ ಸಮಸ್ಯೆಗೆ ಶೀಘ್ರ ಇತ್ಯರ್ಥ: ಸಿಎಂ
ಹಾಲು ದರ ಏರಿಕೆ ಬಜೆಟ್‌ನಲ್ಲಿ ಪ್ರಸ್ತಾವನೆ: ಡಿವಿಎಸ್
ರಸಗೊಬ್ಬರ: ಮತ್ತೆ ಪ್ರತಿಭಟನೆಗಿಳಿದ ರೈತರು