ಕಾಂಗ್ರೆಸ್ ಜತೆಗೆ ಮುನಿಸಿಕೊಂಡಿರುವ ಚಿಕ್ಕಬಳ್ಳಾಪುರ ಸಂಸದ ಜಾಲಪ್ಪ ಮತ್ತೆ ಪಕ್ಷದ ವಿರುದ್ಧ ತಮ್ಮ ಅಸಹನೆ ಹೊರಗೆಡಹಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾಲಪ್ಪ, "ಕಾಂಗ್ರೆಸ್ ಪರಿಸ್ಥಿತಿ ರಾಜ್ಯದಲ್ಲಿ ಚಿಂತಾಜನಕವಾಗಿದೆ. ರಾಜ್ಯದಲ್ಲಿ ನಾಯಕತ್ವದ ವೈಫಲ್ಯಕ್ಕೆ ಹೈಕಮಾಂಡ್ ನೇರ ಹೊಣೆ ಹೊರಬೇಕಾಗಿದೆ" ಎಂದು ದೂರಿದ್ದಾರೆ.
"ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತಂದು ನಾನು ತಪ್ಪು ಮಾಡಿದೆ. ಕಾಂಗ್ರೆಸ್‌ಗೆ ಬಂದದ್ದರಿಂದ ಅವರ ರಾಜಕೀಯ ಭವಿಷ್ಯ ಹಾಳಾಗಿದೆ. ಈ ಬಗ್ಗೆ ನಾನೀಗ ಪಶ್ಚಾತ್ತಾಪಪಡುವಂತಾಗಿದೆ" ಎಂದು ಜಾಲಪ್ಪ ವಿಷಾದ ವ್ಯಕ್ತಪಡಿಸಿದರು.
ತಾನೀಗ ಕಾಂಗ್ರೆಸ್ ಪಕ್ಷದಲ್ಲಿರುವ ಕಾರಣ, ಲೋಕಸಭೆಯಲ್ಲಿ ಯುಪಿಎ ಸರಕಾರ ವಿಶ್ವಾಸಮತ ಕೋರುವ ವೇಳೆ ಕೇಂದ್ರ ಸರಕಾರದ ಪರ ಮತಚಲಾಯಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಜಾಲಪ್ಪ ಅವರ ಈ ಹೇಳಿಕೆ ಅವರು ಮುಂದೆ ಬಿಜೆಪಿ ಸೇರುವರೆಂಬ ವದಂತಿಗೆ ಮತ್ತಷ್ಟು ಪುಷ್ಟಿನೀಡಿದೆ.
|