ಬೆಂಗಳೂರು: ದಾವಣಗೆರೆ ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲ ಬಾಧೆ ತಾಳಲಾರದ ಜಗಳೂರಿನ ಮಡ್ರಹಳ್ಳಿಯ ಬಸವರಾಜ್, ಮಳೆ ಇಲ್ಲದೆ ಬೆಳೆ ಒಣಗಿದ ಪರಿಣಾಮ ತೀವ್ರ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಸವರಾಜ್, ಈ ಹಿಂದೆ ಬಂದ ಬೆಳೆ ಮಾರಾಟಮಾಡಿ ಮನೆ ಕಟ್ಟಿಸುವ ನಿರ್ಧಾರ ಮಾಡಿದ್ದರು. ಮತ್ತು ಈ ಉದ್ದೇಶಕ್ಕೆ ಅವರು ಸಾಕಷ್ಟು ಸಾಲವನ್ನೂ ಮಾಡಿದ್ದರೆನ್ನಲಾಗಿದೆ.
ಇದಲ್ಲದೆ, ಅವರು ಖಾಸಗಿ ಲೇವಾದೇವಿಗಾರರಿಂದಲೂ ಸಾಲಪಡೆದಿದ್ದಾರೆನ್ನಲಾಗಿದೆ. ಒಳ್ಳೆಯ ಬೆಳೆ ಬಂದರೆ ಸಾಲ ಹಿಂತಿರುಗಿಸಬಹುದೆಂಬ ಆತ್ಮವಿಶ್ವಾಸದಲ್ಲಿದ್ದ ಬಸವರಾಜ್, ಬೆಳೆ ಒಣಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮೃತ ಬಸವರಾಜ್ ಹೆಂಡತಿ ಮತ್ತು ತನ್ನ ಏಕೈಕ ಪುತ್ರನನ್ನು ತೊರೆದಿದ್ದಾರೆ.
|