ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಂತಹಂತವಾಗಿ ಪ್ರಣಾಳಿಕೆ ಜಾರಿ: ಯಡಿಯೂರಪ್ಪ  Search similar articles
ರೈತರಿಗೆ ಉಚಿತ ವಿದ್ಯುತ್, ಎರಡು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಸೇರಿದಂತೆ ಪ್ರಣಾಳಿಕೆಯಲ್ಲಿ ತಿಳಿಸಿರುವ ಅಂಶಗಳನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಶ್ರೀಸಾಮಾನ್ಯ ಹಾಗೂ ರೈತರಿಗೆ ಹೊರೆಯಾಗದ ಯೋಜನೆಯನ್ನು ಪ್ರಕಟಿಸಲಾಗುವುದು. ಆದರೆ ಬಜೆಟ್ ವಿಷಯಗಳನ್ನು ಈಗಲೇ ಬಹಿರಂಗಗೊಳಿಸುವುದು ಅಸಾಧ್ಯ ಎಂದು ತಿಳಿಸಿದರು.

ಈ ಬಾರಿ ಮುಂಗಾರು ಮಳೆ ರಾಜ್ಯದಲ್ಲಿ ನಿರೀಕ್ಷೆಯಂತೆ ಆಗಿಲ್ಲ. ಇನ್ನೊಂದು ವಾರದಲ್ಲಿ ಮಳೆ ಬಂದರೆ ಸಮಸ್ಯೆಗಳು ಪರಿಹಾರವಾಗುತ್ತದೆ. ಆದರೂ ಸರಕಾರ ಸಾಕಷ್ಟು ಕ್ರಮಕ್ಕೆ ಮುಂದಾಗಿದೆ. ವಿದ್ಯುತ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈಗಾಗಲೇ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಸಂಬಂಧ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರ ನೆರವಿಗೆ ಬಂದರೆ ಸಮಸ್ಯೆ ಪರಿಹಾರವಾಗುತ್ತದೆ. ಇದಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸರಕಾರ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಮತ್ತಷ್ಟು
ಬಜೆಟ್ ಮಂಡನೆಗೆ ಕ್ಷಣಗಣನೆ
ವಿಶ್ವಾವಿದ್ಯಾಲಯ ಸ್ಥಳಾಂತರಕ್ಕೆ ಹುನ್ನಾರ: ರೇವಣ್ಣ
ದಾವಣಗೆರೆಯಲ್ಲಿ ರೈತ ಆತ್ಮಹತ್ಯೆ
ಬಿಜೆಪಿಗೆ ಮತ್ತೊಬ್ಬ 'ದಳಪತಿ'
ವಿವಾದದ ಸುಳಿಯಲ್ಲಿ ರೋಷನ್ ಬೇಗ್
ಅರ್ಥಶಾಸ್ತ್ರ-ವಾಣಿಜ್ಯಶಾಸ್ತ್ರ ಕದನ