ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು 2 ನಾಮಪತ್ರಗಳು ಸಲ್ಲಿಕೆಯಾಗಿವೆ. ಹಿರಿಯ ಸಾಹಿತಿ ಡಾ.ಸಿ. ವೀರಣ್ಣ ಮತ್ತು ಜಾನಪದ ಜಜ್ಞ ಡಾ.ನಲ್ಲೂರ ಪ್ರಸಾದ್ ನಾಮಪತ್ರ ಸಲ್ಲಿಸಿದ ಮೊದಲಿಗರು.
ಬುಧವಾರ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ವೀರಣ್ಣ ಮತ್ತು ನಲ್ಲೂರ ಪ್ರಸಾದ್ ಅವರುಗಳು ಚುನಾವಣಾಧಿಕಾರಿ ಎ.ನಾಗರಾಜ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು.
ಆಗಸ್ಟ್ 24ರಂದು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಜುಲೈ 21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನಾಮಪತ್ರ ವಾಪಸ್ ಪಡೆಯಲು ಜುಲೈ 26 ಕೊನೆಯ ದಿನವಾಗಿರುತ್ತದೆ. ಅಧ್ಯಕ್ಷ ಸ್ಥಾನದ ಚುನಾವಣೆ ಜೊತೆಯಲ್ಲೇ 29 ಜಿಲ್ಲಾ ಘಟಕ ಹಾಗೂ 4 ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೂ ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಗುರುತಿನ ಚೀಟಿ ಇಲ್ಲದವರು ಎರಡು ಭಾವಚಿತ್ರ ನೀಡಿ ಗುರುತಿನ ಚೀಟಿ ಪಡೆಯಬಹುದಾಗಿದೆ ಎಂದು ಚುನಾವಣಾಧಿಕಾರಿ ಎ.ನಾಗರಾಜ ತಿಳಿಸಿದ್ದಾರೆ.
ಈ ಬಾರಿ ಅಧ್ಯಕ್ಷರ ಚುನಾವಣೆಯಲ್ಲಿ 62 ಸಾವಿರ ಮತಗಳಿದ್ದು ಯಾರು ಆಯ್ಕೆಯಾಗಬಹುದೆಂಬ ಕುತೂಹಲ ಹೆಚ್ಚಾಗಿದೆ.
|