ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ಗೌಡ  Search similar articles
ಗಣಿ ಮಾಫಿಯಾದಿಂದ ರಾಜ್ಯದ ಸಂಪತ್ತು ಲೂಟಿಯಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ.

ಬುಧವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗಣಿಧಣಿಗಳ ಅಬ್ಬರ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇವರು ಹಣದ ಆಮಿಷವೊಡ್ಡಿ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂದು ದೂರಿದರು.

ಪಕ್ಷಾಂತರಗೊಂಡಿರುವ ಶಾಸಕರ ಕುರಿತು ಜೆಡಿಎಸ್ ತಲೆಕೆಡಿಸಿಕೊಂಡಿಲ್ಲ. ರಾಜ್ಯದಲ್ಲಿ ಆಗುತ್ತಿರುವ ಈ ಬೆಳವಣಿಗೆಯಿಂದ ಯಾರಿಗೂ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಯುಪಿಎಗೆ ಬೆಂಬಲ ನೀಡುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಆ ಬಗ್ಗೆ ಏನು ಹೇಳಲಾಗದು. ಶುಕ್ರವಾರದಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.
ಮತ್ತಷ್ಟು
ಜನತಾ ಪರಿವಾರ ತೇಪೆಗೆ ನಾಡಗೌಡ ಪ್ರಯತ್ನ
ಕೆಪಿಸಿಸಿಗೆ ಹೊಸ ಅಧ್ಯಕ್ಷರಾರು?
ಕಸಾಪ: 2 ನಾಮಪತ್ರ ಸಲ್ಲಿಕೆ
ಬಜೆಟ್ ಅಧಿವೇಶನದಲ್ಲಿ 2 ವಿಧೇಯಕಗಳ ಮಂಡನೆ: ಶೆಟ್ಟರ್
ಹಂತಹಂತವಾಗಿ ಪ್ರಣಾಳಿಕೆ ಜಾರಿ: ಯಡಿಯೂರಪ್ಪ
ಸರಕಾರದ ಚೊಚ್ಚಲ ಬಜೆಟಿನೊಳಗೇನಿದೆ?