ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್ಲರ ಸಲಹೆಯೊಂದಿಗೆ ಬಜೆಟ್ ರೂಪಿಸಿದ್ದೇನೆ: ಸಿಎಂ  Search similar articles
PTI
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಯಡಿಯೂರಪ್ಪ ಅವರು ಮಂಡಿಸುತ್ತಿರುವ ಚೊಚ್ಚಲ ಬಜೆಟ್ ಮೇಲೆ ರಾಜ್ಯದ ಜನತೆ ಅಪಾರ ನೀರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ನೀರೀಕ್ಷೆಗೆ ತಕ್ಕಂತೆ ಬಜೆಟ್ ತಯಾರಾಗಿದೆ ಎನ್ನುತ್ತಾರೆ ಮುಖ್ಯಮಂತ್ರಿ ಯಡಿಯೂರಪ್ಪ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಜೆಟ್ ಪೂರ್ವ ಸಭೆಗಳನ್ನು ನಡೆಸಿ ಬಜೆಟ್ ತಯಾರಿಸಿದ್ದೇವೆ. ರೈತ ಪ್ರತಿನಿಧಿಗಳೊಂದಿಗೂ ಬಜೆಟ್ ಪೂರ್ವ ಚರ್ಚೆ ನಡೆಸಿದ್ದು, ರೈತ ಸ್ನೇಹಿ ಬಜೆಟ್ ನೀಡುವ ಆಸೆ ಹೊಂದಿದ್ದೇನೆ ಎಂದು ಮಾಧ್ಯಮಗಳಿಗೆ ಇಂದು ಮುಂಜಾನೆ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದ ಅಭಿವೃದ್ದಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಬಜೆಟ್ ತಯಾರಿಕೆಯಲ್ಲಿ ಸಾಕಷ್ಟು ಶ್ರಮ ವಹಿಸಿದ್ದೇವೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುವತ್ತ ನಾವು ಗಮನ ಹರಿಸುತ್ತೇವೆ. ಹಳ್ಳಿಗಾಡಿನ ಜನ ನಗರ ಪ್ರದೇಶಕ್ಕೆ ವಲಸೆ ಬರುತ್ತಿರುವುದರಿಂದ ಹಳ್ಳಿಗಳು ಬರಿದಾಗುತ್ತಿವೆ. ನಗರ ಪ್ರದೇಶದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಗ್ರಾಮೀಣ ಉದ್ಯೋಗ ಸೃಷ್ಟಿಗೆ ಗಮನ ಹರಿಸುವ ಚಿಂತನೆ ಇದೆ ಎಂದರು.

ರಾಜ್ಯದ ಯಾವುದೇ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾದರೂ ಅದು ಮತ್ತೊಂದು ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಉದ್ಯಮ ಕ್ಷೇತ್ರದ ಸಮಸ್ಯೆಗಳಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾಗಿದೆ. ರಾಜ್ಯ ಸಮೃದ್ಧವಾಗುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮುನ್ನಡೆಯಲಾಗುವುದು. ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ದೇವರ ದಯೆಯಿಂದ ಉತ್ತಮ ಮಳೆ ಬರುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಪ್ರಣಾಣಿಕೆಯ ಭರವಸೆಗಳು ಈಡೇರುತ್ತವಾ? ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಯಡಿಯೂರಪ್ಪ, ಯಾವುದೇ ಪಕ್ಷ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಒಂದೇ ಬಾರಿಗೆ ಈಡೇರಿಸಲು ಸಾಧ್ಯವಿಲ್ಲ. ಬಿಜೆಪಿ ನೀಡಿರುವ ಭರವಸೆಗಳನ್ನು ಈಡೇರಿಸಲು ಐದು ವರ್ಷಗಳ ಕಾಲಾವಕಾಶ ಅಗತ್ಯವಿದೆ. ಲಭ್ಯವಿರುವ ಸಂಪನ್ಮೂಲಗಳಲ್ಲಿ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಇದು ಬಿಜೆಪಿ ಸರಕಾರದ ಚೊಚ್ಚಲ ಬಜೆಟ್. ಆದರೂ ಯಡಿಯೂರಪ್ಪನವರ ಈ ಹಿಂದೆ ಕುಮಾರಸ್ವಾಮಿಯವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಹಣಕಾಸು ಖಾತೆ ಹೊಂದಿದ್ದಾಗ ಎರಡು ಬಜೆಟ್ ಮಂಡಿಸಿದ್ದಾರೆ. ಹಿಂದಿನ ಅನುಭವವನ್ನು ಈಗ ಬಳಸಿಕೊಂಡು ಉತ್ತಮ ಬಜೆಟ್ ಮಂಡಿಸುವರೆಂಬ ನೀರೀಕ್ಷೆ ಜನರದ್ದು. ಈಗಾಗಲೆ ರಾಜ್ಯಪಾಲರ ಆಡಳಿತದಲ್ಲಿ 4 ತಿಂಗಳ ಲೇಖಾನುದಾನ ಮಂಡನೆಯಾಗಿದೆ. ಉಳಿದ 8 ತಿಂಗಳ ಅವಧಿಗೆ ಯಡಿಯೂರಪ್ಪ ಬಜೆಟ್ ಮಂಡಿಸುತ್ತಿದ್ದಾರೆ.
ಮತ್ತಷ್ಟು
ತಾಲೂಕು ಕೇಂದ್ರಗಳಲ್ಲೂ ವಸತಿ ಸಮುಚ್ಚಯ: ಕೃಷ್ಣಯ್ಯಶೆಟ್ಟಿ
ರಸಗೊಬ್ಬರ: ರಾಜ್ಯಪಾಲರಿಗೆ ಸಿಎಂ ಮನವಿ
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ಗೌಡ
ಜನತಾ ಪರಿವಾರ ತೇಪೆಗೆ ನಾಡಗೌಡ ಪ್ರಯತ್ನ
ಕೆಪಿಸಿಸಿಗೆ ಹೊಸ ಅಧ್ಯಕ್ಷರಾರು?
ಕಸಾಪ: 2 ನಾಮಪತ್ರ ಸಲ್ಲಿಕೆ