ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಸೋಮವಾರ ಬೆಳಿಗ್ಗೆ ದೊರೆತಿರುವ ಅನುಮಾನಾಸ್ಪದ ಸೂಟ್‌ಕೇಸ್ ಅನ್ನು ಪೊಲೀಸರು ನಗರದ ನೆಹರೂ ಮೈದಾನದಲ್ಲಿ ತಂದಿಟ್ಟಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದೆ.
ನಗರದಲ್ಲಿ ಇಂದು ಬೆಳಿಗ್ಗೆ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಬಾಂಬ್ ಇರುವುದು ಖಾತರಿ ಮಾಡಿಕೊಂಡ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾದರು. ಸೂಟ್‌ಕೇಸ್ ಅನ್ನು ನಗರದ ನೆಹರೂ ಮೈದಾನದಲ್ಲಿ ತಂದಿಟ್ಟು, ಸುತ್ತಲು ಮರಳಿನ ಚೀಲವನ್ನು ಇಡಲಾಗಿದೆ.
ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಗುಂಪುಗುಂಪಾಗಿ ಸಾವಿರಾರು ಜನರು ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರವಷ್ಟೇ ರಾಜ್ಯ ರಾಜಧಾನಿಯಲ್ಲಿ ನಡೆದ ಬಾಂಬ್ ಸ್ಫೋಟದ ಭೀತಿ ಜನರ ಮಸ್ಸಿನಿಂದ ಮಾಸದಿರುವಾಗ ಇದೀಗ ಕರಾವಳಿಯಲ್ಲೂ ಬಾಂಬ್ ಪತ್ತೆಯಾಗಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
|