ಸಿಲಿಕಾನ್ ಸಿಟಿಯಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಭವಿಸಿ ನಾಲ್ಕು ದಿನ ಕಳೆದರೂ ಪೊಲೀಸ್ ಇಲಾಖೆ ಯಾವುದೇ ಮಹತ್ವದ ಸುಳಿವನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದರೂ, ಹೆಚ್ಚಿನ ಸುಳಿವು ಪೊಲೀಸರಿಗೆ ದೊರೆತಿಲ್ಲ. ಕೇಂದ್ರ ಗುಪ್ತಚರ ದಳ, ಸಿಬಿಐ ಹಾಗೂ ಗುಜರಾತ್ ಪೊಲೀಸ ರೊಂದಿಗೆ ರಾಜ್ಯ ಪೊಲೀಸರು ಸತತ ಸಂಪರ್ಕ ಹೊಂದಿದ್ದಾರೆ.
ಬೆಂಗಳೂರಿನಲ್ಲಿ ಹಾಗೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಇಡೀ ದೇಶವನ್ನೇ ತಲ್ಲಣ ಗೊಳಿಸಿದ್ದು, ಈ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳು ಈಗಾಗಲೇ ಎಲ್ಲೆಡೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವ್ಯವಸ್ಥಿತ ಸಂಚು ರೂಪಿಸಿ ನಡೆಸಿರುವ ಈ ಸ್ಫೋಟದ ಹಿಂದೆ ಸ್ಥಳೀಯರು ಭಾಗಿಯಾಗಿದ್ದಾರೆಯೇ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ. ಅಲ್ಲದೆ, ಈ ಕೃತ್ಯದ ಹಿಂದೆ ಇಂಡಿಯನ್ ಮುಜಾಹಿದೀನ್ ಕೈವಾಡವಿರುವುದು ಬೆಳಕಿಗೆ ಬಂದಿದೆ.
ಈ ಎಲ್ಲಾ ವಿವರಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕಿದೆ. ಈ ನಡುವೆ ಚನ್ನಪಟ್ಟಣದಲ್ಲಿ ದೊರೆತಿರುವ ಸ್ಫೋಟಕ ವಸ್ತುಗಳ ತನಿಖೆಗಾಗಿ ಕೇಂದ್ರ ತನಿಖೆ ತಂಡ ಆಗಮಿಸಿದ್ದು, ವಸ್ತುಗಳನ್ನು ವಶಪಡಿಸಿಕೊಂಡಿದೆ.
|