ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ: ಮುಂದುವರಿದ ಪ್ರತಿಭಟನೆ Search similar articles
ರಸಗೊಬ್ಬರದ ಅಭಾವದಿಂದ ಆಕ್ರೋಶಗೊಂಡಿರುವ ರೈತರು ರಾಜ್ಯದ ನಾನಾ ಕಡೆಗಳಲ್ಲಿ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ರಾಮನಗರದ ಐಜೂರು ವೃತ್ತದ ಬಿ.ಎಂ. ರಸ್ತೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ರೈತರು, ಕಳೆದೆರಡು ದಿನಗಳಿಂದ ಮುಂಗಾರು ಮಳೆಯಾಗುತ್ತಿದ್ದು, ರೈತರು ತಮ್ಮ ಭೂಮಿಗಳನ್ನು ಉಳುಮೆ ಮಾಡಲು ರಸಗೊಬ್ಬರಕ್ಕಾಗಿ ಮಳಿಗೆ ಮುಂದೆ ನಿಂತಿದ್ದಾರೆ. ಲಾರಿಗಳಲ್ಲಿ ರಸಗೊಬ್ಬರ ಬಂದರೂ ರಸಗೊಬ್ಬರ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ಈ ನಡುವೆ ಶಿಡ್ಲಘಟ್ಟದಲ್ಲಿಯೂ ರೈತರು ಪ್ರತಿಭಟನೆ ನಡೆಸಿರುವ ವರದಿ ಬಂದಿದ್ದು, ನಗರದ ಬಸ್ ನಿಲ್ದಾಣದ ಸರ್ಕಲ್ ಬಳಿ ನೂರಾರು ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿ ಸಿದ್ದಾರೆ.

ಅಲ್ಲದೆ, ಚನ್ನಪಟ್ಟಣದಲ್ಲೂ ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸಿದ ರೈತರು, ಧಾರಾಕಾರ ಮಳೆ ಸುರಿಯುತ್ತಿದ್ದರೂ, ರಸಗೊಬ್ಬರ ದೊರಕದೆ ರೈತರು ನಷ್ಟ ಅನುಭವಿಸುವಂತಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಸ್ಫೋಟ: ಮಹತ್ವದ ಸುಳಿವು ಪತ್ತೆಗೆ ಇಲಾಖೆ ವಿಫಲ
ಗುಪ್ತಚರ ಇಲಾಖೆ ಬಲವರ್ಧನೆಗೆ ಕುಮಾರಸ್ವಾಮಿ ಆಗ್ರಹ
ಉಪಸಭಾಧ್ಯಕ್ಷ ಚುನಾವಣೆ: ಬೋಪಯ್ಯ ಅವಿರೋಧ ಆಯ್ಕೆ
ಬಾಂಬ್ ಅಲ್ಲ, ಅದು ಕಳವಾಗಿದ್ದ 'ಸೂಟ್‌‌ಕೇಸ್' !
ಭಯೋತ್ಪಾದಕ ನಿಗ್ರಹಕ್ಕೆ ಕಠಿಣ ಕ್ರಮ: ಸಿಎಂ
ಮಂಗಳೂರಿನಲ್ಲೂ ಬಾಂಬ್ ಪತ್ತೆ ?