ಮೈಸೂರು ಮಹಾನಗರ ಪಾಲಿಕೆಯ 8 ಮಂದಿ ಜೆಡಿಎಸ್ ಸದಸ್ಯರು ಹಾಗೂ ಇಬ್ಬರು ಪಕ್ಷೇತರರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಜೆಡಿಎಸ್‌ಗೆ ಮತ್ತೊಂದು ಆಘಾತ ನೀಡಿದೆ.
ಜೆಡಿಎಸ್‌ನ ಮಾಜಿ ಮೇಯರ್ ಎಚ್.ಎನ್. ಶ್ರೀಕಂಠಯ್ಯ, ಮಾಜಿ ಉಪಮೇಯರ್ ಹಾಗೂ ಮೈಸೂರು ನಗರ ಜೆಡಿಎಸ್ ಅಧ್ಯಕ್ಷ ಟಿ. ದೇವರಾಜ್, ಪಾಲಿಕೆ ಸದಸ್ಯರಾದ ಕೆ.ಆರ್. ಲಿಂಗಪ್ಪ, ಕೆ.ವಿ. ಮಲ್ಲೇಶ್, ಸೇರಿದಂತೆ ಪಾಲಿಕೆಯ ಜೆಡಿಎಸ್ ಪ್ರಮುಖರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ, ಪಕ್ಷೇತರ ಸದಸ್ಯರಾದ ಪಾರ್ವತಿ ಹಾಗೂ ಐಯಾಜ್ ಪಾಷ ಅವರೂ ಬಿಜೆಪಿಗೆ ಸೇರಿದ್ದಾರೆ.
ಈ ಮೂಲಕ ಬಿಜೆಪಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿವ ಪ್ರಯತ್ನದಲ್ಲಿ ಮುಂದಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರು ಪಾಲಿಕೆ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇದರೊಂದಿಗೆ ಮೈಸೂರು ಪಾಲಿಕೆಯಲ್ಲಿ 18 ಸದಸ್ಯರನ್ನು ಹೊಂದಿದ ಬಿಜೆಪಿ ತನ್ನ ಸಂಖ್ಯಾಬಲವನ್ನು 28ಕ್ಕೆ ಹೆಚ್ಚಿಸಿಕೊಂಡಂತಾಗಿದೆ.
|