ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಡ್ ಶೆಡ್ಡಿಂಗ್ ರದ್ದು: ಸಿಎಂ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಡ್ ಶೆಡ್ಡಿಂಗ್ ರದ್ದು: ಸಿಎಂ ಘೋಷಣೆ Search similar articles
NRB
ಕಳೆದ ಕೆಲವು ದಿನಗಳಿಂದ ವರುಣನ ಕೃಪೆಯಿಂದಾಗಿ ರಾಜ್ಯದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಅಭಾವ ಕಡಿಮೆಯಾಗಿರುವು ದರಿಂದ ಲೋಡ್ ಶೆಡ್ಡಿಂಗ್ ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿರುವುದಾಗಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಲೋಡ್ ಶೆಡ್ಡಿಂಗ್ ರದ್ದು ಪಡಿಸುವುದಾಗಿ ಮಂಗಳವಾರ ಘೋಷಿಸಿದರು.

ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಇದೇ ರೀತಿ ಮುಂದುವರಿದರೆ ವಿದ್ಯುತ್ ಅಭಾವ ಉಂಟಾಗದು ಎಂದು ಹೇಳಿದರು.

ಇದೇ ವೇಳೆ ಭಯೋತ್ಪಾದನೆ ಕುರಿತು ಮಾತನಾಡಿದ ಅವರು, ಭಯೋತ್ಪಾದಕರ ಧಮನಕ್ಕೆ ವಿಶೇಷ ಕಾರ್ಯಪಡೆಯನ್ನು ನಿಯೋಜಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ಈ ಬಗ್ಗೆ ಕೇಂದ್ರದ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಬಾಂಬ್ ಸ್ಫೋಟಕ್ಕೆ ಕಾರಣವಾದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವನ್ನು ಇದೇ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.
ಮತ್ತಷ್ಟು
ನಾಗಪ್ಪ ಹತ್ಯೆ ಪ್ರಕರಣ - ಇಬ್ಬರ ಗುರುತು ಪತ್ತೆ
ಕೋಕಾ ಕಾಯ್ದೆಗೆ ತಿದ್ದುಪಡಿ: ಯಡಿಯೂರಪ್ಪ
ಚಿಕ್ಕಮಗಳೂರು-ಹುಬ್ಬಳ್ಳಿಯಲ್ಲಿ ಅಪಘಾತ : 4ಸಾವು
ಸ್ಫೋಟದ ಹಿಂದೆ ಬಿಜೆಪಿ ಕೈವಾಡ: ರೇವಣ್ಣ
ಮೈಸೂರು ಪಾಲಿಕೆಯ 10 ಮಂದಿ ಬಿಜೆಪಿಗೆ
ಮಂತ್ರಿ ಮಂಡಲ ಪುನರಾಚನೆಗೆ ಬಿಜೆಪಿ ಬದ್ಧ: ಡಿವಿಎಸ್