ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪದ್ಮಪ್ರಿಯಾ ಪ್ರಕರಣದಲ್ಲಿ ತಾನು ಹರಕೆಯ ಕುರಿ: ಅತುಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದ್ಮಪ್ರಿಯಾ ಪ್ರಕರಣದಲ್ಲಿ ತಾನು ಹರಕೆಯ ಕುರಿ: ಅತುಲ್ Search similar articles
ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರ ಸಾವಿನ ಪ್ರಕರಣದಲ್ಲಿ ತನ್ನ ಪಾತ್ರವೇನೂ ಇಲ್ಲ, ಇದರಲ್ಲಿ ನನ್ನನ್ನು ವಿನಾಃ ಕಾರಣ ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಆರೋಪಿ ಅತುಲ್ ಕುಮಾರ್ ಅವರು ಮಂಗಳವಾರ ಹೈಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.

ಪದ್ಮಪ್ರಿಯಾ ಅವರು ಜು.11ರಂದು ಕಾಣೆಯಾಗಿದ್ದು, 13ರಂದು ಪೊಲೀಸರು ತನ್ನನ್ನು ಬಂಧಿಸಿರುವುದಾಗಿ ಹೇಳಿರುವ ಅತುಲ್ ಅವುರ, ಜು.15ರಂದು ಪದ್ಮಪ್ರಿಯಾ ಅವರು ಆತ್ಮಹತ್ಯೆ ಮಾಡಿಕೊಂಡಾಗಲೂ ತಾನು ಪೊಲೀಸರ ಬಂಧನದಲ್ಲಿಯೇ ಇದ್ದಿರುವುದಾಗಿ ಹೇಳಿದ್ದಾರೆ.

ಆ ದಿನ ಏನು ನಡೆಯಿತು ಎಂಬುದು ತನಗೆ ತಿಳಿದಿಲ್ಲ ಎಂದು ಅಲವತ್ತುಕೊಂಡಿರುವ ಅತುಲ್, ಈ ಪ್ರಕರಣದಲ್ಲಿ ತನ್ನನ್ನು ಉದ್ದೇಶಪೂರ್ವಕವಾಗಿ ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಪದ್ಮಪ್ರಿಯಾ ಅವರ ಸಾವಿನ ಪ್ರಕರಣ ಹಲವಾರು ತಿರುವುಗಳನ್ನು ಪಡೆದುಕೊಂಡಿದ್ದು, ಶಾಸಕ ರಘುಪತಿ ಭಟ್ ಅವರು ನಿಕಟವರ್ತಿ ಅತುಲ್‌ ಕುಮಾರ್ ಮೇಲೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಅತುಲ್ ಅವರನ್ನು ಬಂಧಿಸಿದ್ದರು.

ಜು.1ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಬಿಡುಗಡೆ ಮಾಡುವಂತೆ ಅತುಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉಡುಪಿ ನ್ಯಾಯಾಲಯ ತಿರಸ್ಕರಿಸಿತ್ತು.
ಮತ್ತಷ್ಟು
ಅಪಹೃತ ಬಾಲಕನ ಬಿಡುಗಡೆಗೆ 5 ಲಕ್ಷ ರೂ.ಒತ್ತೆ
ವಿಧಾನಸಭೆ ಉಪಾಧ್ಯಕ್ಷರಾಗಿ ಬೋಪಯ್ಯ ನೇಮಕ
ಪದ್ಮಪ್ರಿಯಾ ಪ್ರಕರಣ ಸಿಬಿಐಗೆ ವಹಿಸಿ: ಖರ್ಗೆ
ಲೋಡ್ ಶೆಡ್ಡಿಂಗ್ ರದ್ದು: ಸಿಎಂ ಘೋಷಣೆ
ನಾಗಪ್ಪ ಹತ್ಯೆ ಪ್ರಕರಣ - ಇಬ್ಬರ ಗುರುತು ಪತ್ತೆ
ಕೋಕಾ ಕಾಯ್ದೆಗೆ ತಿದ್ದುಪಡಿ: ಯಡಿಯೂರಪ್ಪ