ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ರಾಜ್ಯ ನಾಯಕರು ಸರಿಯಾಗಿಲ್ಲ: ಸಾಂಗ್ಲಿಯಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ರಾಜ್ಯ ನಾಯಕರು ಸರಿಯಾಗಿಲ್ಲ: ಸಾಂಗ್ಲಿಯಾನ Search similar articles
ರಾಜ್ಯದ ಕೆಲವು ನಾಯಕರ ಸಣ್ಣತನದಿಂದ ಬಿಜೆಪಿ ಎಲ್ಲಾ ವರ್ಗದ ವಿಶ್ವಾಸವನ್ನು ಗಳಿಸುವಲ್ಲಿ ವಿಫಲವಾಗುತ್ತಿದೆ ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡ ಸಂಸದ ಡಾ.ಎಚ್.ಟಿ. ಸಾಂಗ್ಲಿಯಾನ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ವಿಶ್ವಾಸಮತ ಸಂದರ್ಭದಲ್ಲಿ ಯುಪಿಎ ಪರ ಮತ ಚಲಾಯಿಸಿ, ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಅವರು, ನಗರದಲ್ಲಿ ಮಂಗಳವಾರ ನಡೆದ ಹಿತಚಿಂತಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಒಳ್ಳೆಯ ಪಕ್ಷ ಮಾತ್ರವಲ್ಲದೆ, ಬಿಜೆಪಿಯ ಕೇಂದ್ರ ನಾಯಕರು ಉತ್ತಮರಿದ್ದಾರೆ. ಆದರೆ ರಾಜ್ಯದ ಕೆಲ ನಾಯಕರು ಸರಿಯಾಗಿಲ್ಲ ಎಂದು ದೂರಿದರು.

ಅಣು ಒಪ್ಪಂದ ದೇಶದ ಹಿತಾಸಕ್ತಿಗೆ ಪೂರಕವಾದದ್ದರಿಂದ ತಾವು ಲೋಕಸಭೆಯಲ್ಲಿ ವಿಶ್ವಾಸಮತ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸಿ ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದೇನೆ. ಈ ತೀರ್ಮಾನದ ಬಗ್ಗೆ ಕ್ಷೇತ್ರದ ಮತದಾರರು ಸೇರಿದಂತೆ ಇಡೀ ದೇಶವೇ ಸಂತಸಗೊಂಡಿದೆ ಎಂದು ಅವರು ವಿವರಿಸಿದರು.

ಆದರೆ ವಿಶ್ವಾಸಮತ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಘಟಕದ ಸದಸ್ಯರು ಹಾಗೂ ಮುಖಂಡರು ತಮ್ಮ ಬಳಿ ಅನುಚಿತವಾಗಿ ವರ್ತಿಸಿದರು. ಎಷ್ಟು ಹಣ ಪಡೆದಿರುವೆ ಎಂದು ಕೇಳಿದ್ದಾರೆ. ಇದರಿಂದ ತಮ್ಮ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಬಿಜೆಪಿಯಿಂದ ಉಚ್ಚಾಟಿತಗೊಂಡಿದ್ದೇನೆ. ಮುಂದಿನ ತೀರ್ಮಾನದ ಕುರಿತು ಇನ್ನು ನಿರ್ಧರಿಸಿಲ್ಲ ಎಂದು ತಿಳಿಸಿದರು.
ಮತ್ತಷ್ಟು
ಪದ್ಮಪ್ರಿಯಾ ಪ್ರಕರಣದಲ್ಲಿ ತಾನು ಹರಕೆಯ ಕುರಿ: ಅತುಲ್
ಅಪಹೃತ ಬಾಲಕನ ಬಿಡುಗಡೆಗೆ 5 ಲಕ್ಷ ರೂ.ಒತ್ತೆ
ವಿಧಾನಸಭೆ ಉಪಾಧ್ಯಕ್ಷರಾಗಿ ಬೋಪಯ್ಯ ನೇಮಕ
ಪದ್ಮಪ್ರಿಯಾ ಪ್ರಕರಣ ಸಿಬಿಐಗೆ ವಹಿಸಿ: ಖರ್ಗೆ
ಲೋಡ್ ಶೆಡ್ಡಿಂಗ್ ರದ್ದು: ಸಿಎಂ ಘೋಷಣೆ
ನಾಗಪ್ಪ ಹತ್ಯೆ ಪ್ರಕರಣ - ಇಬ್ಬರ ಗುರುತು ಪತ್ತೆ