ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶಿವಮೊಗ್ಗ: ಶಂಕಿತ ನಕ್ಸಲ್ ಪೊಲೀಸ್ ಬಲೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಿವಮೊಗ್ಗ: ಶಂಕಿತ ನಕ್ಸಲ್ ಪೊಲೀಸ್ ಬಲೆಗೆ Search similar articles
NRB
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಂಗಳವಾರ ರಾತ್ರಿ ಶಂಕಿತ ನಕ್ಸಲೀಯನೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ತಿಳಿಸಿದ್ದಾರೆ.

ನಕ್ಸಲ್ ನಿಗ್ರಹದಳ ಮತ್ತು ಪೊಲೀಸರು ಮಂಗಳವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ನಕ್ಸಲೀಯ ಕೋರಂಪೇಟೆ ನಿವಾಸಿ ಕೃಷ್ಣ ಎಂಬಾತನನ್ನು ಬಂಧಿಸಿರುವುದಾಗಿ ಅವರು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನಕ್ಸಲೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಕೃಷ್ಣನನ್ನು ವಶಕ್ಕೆ ತೆಗೆದುಕೊಂಡಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ವಿಚಾರಣೆ ವೇಳೆ ಆತ, ನಕ್ಸಲೀಯರ ಅಡಗುತಾಣ, ಶಿವಮೊಗ್ಗ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ನಕ್ಸಲೀಯರ ತಂಡಗಳು, ಅದರ ವ್ಯಾಪ್ತಿ, ಸ್ಫೋಟಕಗಳ ಬಗ್ಗೆ ಮಹತ್ವದ ಮಾಹಿತಿ ನೀಡಿರುವುದಾಗಿ ಎಸ್ಪಿ ಮುರುಗನ್ ವಿವರಿಸಿದ್ದಾರೆ.

ವಿಚಾರಣೆಯ ಬಳಿಕ ಬಂಧಿತ ಕೃಷ್ಣನನ್ನು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.
ಮತ್ತಷ್ಟು
ಬಿಜೆಪಿ ರಾಜ್ಯ ನಾಯಕರು ಸರಿಯಾಗಿಲ್ಲ: ಸಾಂಗ್ಲಿಯಾನ
ಪದ್ಮಪ್ರಿಯಾ ಪ್ರಕರಣದಲ್ಲಿ ತಾನು ಹರಕೆಯ ಕುರಿ: ಅತುಲ್
ಅಪಹೃತ ಬಾಲಕನ ಬಿಡುಗಡೆಗೆ 5 ಲಕ್ಷ ರೂ.ಒತ್ತೆ
ವಿಧಾನಸಭೆ ಉಪಾಧ್ಯಕ್ಷರಾಗಿ ಬೋಪಯ್ಯ ನೇಮಕ
ಪದ್ಮಪ್ರಿಯಾ ಪ್ರಕರಣ ಸಿಬಿಐಗೆ ವಹಿಸಿ: ಖರ್ಗೆ
ಲೋಡ್ ಶೆಡ್ಡಿಂಗ್ ರದ್ದು: ಸಿಎಂ ಘೋಷಣೆ