ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುಚೇಲನ್ ವಿವಾದ: ರಜನಿಯಿಂದ ಪತ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಚೇಲನ್ ವಿವಾದ: ರಜನಿಯಿಂದ ಪತ್ರ Search similar articles
PTI
ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ ಕುಚೇಲನ್ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಕರವೇ ಎಚ್ಚರಿಕೆಗೆ ಸಂಬಂಧಿಸಿದಂತೆ, ನಟ ರಜನಿಕಾಂತ್ ಅವರು ಫಿಲ್ಮ್ ಚೇಂಬರಿಗೆ ಮನವಿ ಪತ್ರವೊಂದನ್ನು ಕಳುಹಿಸಿದ್ದಾರೆ.

ಕುಚೇಲನ್ ಬಿಡುಗಡೆಗೆ ಕನ್ನಡಿಗರು ಸಹಕರಿಸಬೇಕೆಂದು ನಟ ರಜನಿಕಾಂತ್ ಬರೆದಿರುವ ಪತ್ರವು ಮಂಡಳಿಗೆ ತಲುಪಿದ್ದು, ಇದನ್ನು ಬಿಡುಗಡೆ ಮಾಡಿ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ, ಈ ಚಿತ್ರವನ್ನು ಬಿಡುಗಡೆ ಮಾಡಬಾರದೆಂದು ಕರವೇ ಸೇರಿದಂತೆ ಹಲವು ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಆದರೆ ಈ ಬಗ್ಗೆ ಸ್ವತಃ ರಜನಿಕಾಂತ್ ಅವರೇ ಮಂಡಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ಎಲ್ಲರ ಸಹಕಾರ ಕೋರುತ್ತೇವೆ ಎಂದು ತಿಳಿಸಿದ್ದಾರೆ.

ಬಿಡುಗಡೆಗೆ ಅವಕಾಶ ಇಲ್ಲ: ಹೊಗೇನಕಲ್ ಯೋಜನೆ ವಿವಾದದಲ್ಲಿ ಕನ್ನಡಿಗರನ್ನು ನಿಂದಿಸಿರುವ ನಟ ರಜನಿಕಾಂತ್ ಅವರ ಕುಚೇಲನ್ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆಯಾಗಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪುನರುಚ್ಚರಿಸಿದೆ.

ಕನ್ನಡಿಗರ ಬಗ್ಗೆ ರಜನಿಕಾಂತ್ ಆಡಿರುವ ಅಹಂಕಾರದ ಮಾತುಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಹೋರಾಟ ನಡೆಸುತ್ತದೆ. ರಜನಿಕಾಂತ್ ಕನ್ನಡಿಗರಲ್ಲಿ ಕ್ಷಮೆ ಕೋರಿದರೆ ಮಾತ್ರ ಕುಚೇಲನ್ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುತ್ತೇವೆ. ಇಲ್ಲವಾದರೆ ಉಗ್ರ ಹೋರಾಟ ಮುಂದುವರಿಸಲಾಗುತ್ತದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ತಿಳಿಸಿದ್ದಾರೆ.

ಈ ನಡುವೆ ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ ರಜನಿಕಾಂತ್‌ಗೆ ಬೆಂಬಲ ನೀಡಿ ಪರೋಕ್ಷವಾಗಿ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ ಎಂದು ದೂರಿದ್ದಾರೆ. ಅಲ್ಲದೇ ಚೇಂಬರಿಗೆ ಕಳುಹಿಸಿರುವ ಪತ್ರದಲ್ಲಿ ರಜನಿಕಾಂತ್ ಕ್ಷಮೆ ಕೇಳದೆ, ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ. ಏನೇ ಆದರೂ ರಜನಿಕಾಂತ್ ಕ್ಷಮೆ ಕೇಳುವವರೆಗೂ ರಾಜ್ಯದಲ್ಲಿ ಕುಚೇಲನ್ ಚಿತ್ರ ಪ್ರದರ್ಶನ ಅಸಾಧ್ಯ ಎಂದು ಹೇಳಿದ್ದಾರೆ.
ಮತ್ತಷ್ಟು
ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಶಿವಮೊಗ್ಗ: ಶಂಕಿತ ನಕ್ಸಲ್ ಪೊಲೀಸ್ ಬಲೆಗೆ
ಬಿಜೆಪಿ ರಾಜ್ಯ ನಾಯಕರು ಸರಿಯಾಗಿಲ್ಲ: ಸಾಂಗ್ಲಿಯಾನ
ಪದ್ಮಪ್ರಿಯಾ ಪ್ರಕರಣದಲ್ಲಿ ತಾನು ಹರಕೆಯ ಕುರಿ: ಅತುಲ್
ಅಪಹೃತ ಬಾಲಕನ ಬಿಡುಗಡೆಗೆ 5 ಲಕ್ಷ ರೂ.ಒತ್ತೆ
ವಿಧಾನಸಭೆ ಉಪಾಧ್ಯಕ್ಷರಾಗಿ ಬೋಪಯ್ಯ ನೇಮಕ