ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಯಿನ್ ಬೂತ್ ಮಾಲೀಕರಿಗೆ ಇಲಾಖೆಯ ಎಚ್ಚರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಯಿನ್ ಬೂತ್ ಮಾಲೀಕರಿಗೆ ಇಲಾಖೆಯ ಎಚ್ಚರಿಕೆ Search similar articles
NRB
ಬಾಂಬ್ ಸ್ಫೋಟದ ಬಳಿಕ ವದಂತಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಾಯಿನ್ ಬೂತ್ ಮಾಲೀಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ, ಯಾರು ನಿಮ್ಮ ಬೂತ್‌ನಿಂದ ದೂರವಾಣಿ ಕರೆ ಮಾಡುತ್ತಾರೋ ಅವರ ಹೆಸರು ಮತ್ತು ವಿಳಾಸ, ಕರೆಯ ಸಂಖ್ಯೆ ನಮೂದಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.

ಸಿಲಿಕಾನ್‌ ಸಿಟಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿ ಐದು ಕಳೆಯುತ್ತಾ ಬಂದಿದ್ದರೂ ಕೂಡ, ರಾಜಧಾನಿಯಲ್ಲೀಗ ವದಂತಿಗಳದ್ದೇ ಕಾರುಬಾರು, ಇದರಿಂದಾಗಿ ಜನರು ಆತಂಕದಲ್ಲಿಯೇ ದಿನದೂಡುವಂತಾಗಿದೆ.

ಚೇಷ್ಠೆಕೋರರು ನಿರಂತರವಾಗಿ ಹುಸಿ ಕರೆ ಮಾಡಿ ಹೆದರಿಸುವಂತಹ ಘಟನೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕದ ಭಾವನೆ ಹುಟ್ಟುಹಾಕುತ್ತಿರುವ ಕಾರ್ಯಮಾಡುತ್ತಿರುವುದಾಗಿ ಪೊಲೀಸ್ ಇಲಾಖೆ ದೂರಿದೆ.

ಆ ನಿಟ್ಟಿನಲ್ಲಿ ಚೇಷ್ಠೆಕೋರರ ವಿರುದ್ಧ ತೀವ್ರ ನಿಗಾ ಇಡಲು ನಿರ್ಧರಿಸಿರುವುದಾಗಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ(ಲಾ ಎಂಡ್ ಆರ್ಡರ್) ಎಂ.ಆರ್.ಪೂಜಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಹುಸಿ ಬಾಂಬ್ ಕರೆಗಳನ್ನು ಮಾಡುತ್ತಿರುವ ಚೇಷ್ಠೆಕೋರರನ್ನು ಬಂಧಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತರಾಗಿರುವುದಾಗಿ ತಿಳಿಸಿದ ಅವರು, ಇದನ್ನು ನಾವು ಲಘುವಾಗಿ ಪರಿಗಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮತ್ತಷ್ಟು
ಕುಚೇಲನ್ ವಿವಾದ: ರಜನಿಯಿಂದ ಪತ್ರ
ಸರಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಶಿವಮೊಗ್ಗ: ಶಂಕಿತ ನಕ್ಸಲ್ ಪೊಲೀಸ್ ಬಲೆಗೆ
ಬಿಜೆಪಿ ರಾಜ್ಯ ನಾಯಕರು ಸರಿಯಾಗಿಲ್ಲ: ಸಾಂಗ್ಲಿಯಾನ
ಪದ್ಮಪ್ರಿಯಾ ಪ್ರಕರಣದಲ್ಲಿ ತಾನು ಹರಕೆಯ ಕುರಿ: ಅತುಲ್
ಅಪಹೃತ ಬಾಲಕನ ಬಿಡುಗಡೆಗೆ 5 ಲಕ್ಷ ರೂ.ಒತ್ತೆ