ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿವಿ ಅವ್ಯವಹಾರ - ತನಿಖೆಗೆ ಕ್ರಮ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿವಿ ಅವ್ಯವಹಾರ - ತನಿಖೆಗೆ ಕ್ರಮ: ಸಿಎಂ Search similar articles
ರಾಮನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ನಡೆದಿರುವ ಹಗರಣದ ಕುರಿತು ಉನ್ನತ ಮಟ್ಟದ ತನಿಖೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದ್ದಾರೆ.

ಸದನದಲ್ಲಿ ಬುಧವಾರ ಮಾತನಾಡಿದ ಅವರು, ರಾಜೀವ್‌‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ಕಟ್ಟಡ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಶೀಘ್ರವೇ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ಶಾಸಕರ ಧರಣಿ:

ಇದಕ್ಕೂ ಮೊದಲು ಈ ಹಗರಣದ ಕುರಿತು ನಿಯಮ 60ರ ಅಡಿಯಲ್ಲೆ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಜೆಡಿಎಸ್‌‌ನ ಎಚ್.ಡಿ. ರೇವಣ್ಣ ಪಟ್ಟು ಹಿಡಿದರು. ಇದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿ, ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿರುವುದಾಗಿ ತಿಳಿಸಿದರು.

ಆದರೆ ಮುಖ್ಯಮಂತ್ರಿಗಳ ಈ ಉತ್ತರದಿಂದ ಸಮಾಧಾನಗೊಳ್ಳದ ರೇವಣ್ಣ, ಮತ್ತೆ ಸಭಾಧ್ಯಕ್ಷರನ್ನು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಭಾಧ್ಯಕ್ಷರು ರೇವಣ್ಣ ಅವರ ಮಾತನ್ನು ತಳ್ಳಿ ಹಾಕಿ, ನಿಯಮ 60ರ ಅಡಿ ಈ ವಿಷಯ ಚರ್ಚಿಸುವ ಅಗತ್ಯವಿಲ್ಲ. ಬೇರೆ ರೂಪದಲ್ಲಿ ಅವಕಾಶ ಕೊಡುತ್ತೇನೆ ಎಂದು ಹೇಳಿದರು.

ಆದರೆ ಪಟ್ಟು ಬಿಡದ ರೇವಣ್ಣ ಹಾಗೂ ಮತ್ತಿತರ ಜೆಡಿಎಸ್ ಸದಸ್ಯರು ಧರಣಿಗೆ ಮುಂದಾದರು. ಕೊನೆಗೆ ಸಭಾಧ್ಯಕ್ಷರು ನಾಳೆ ಮಧ್ಯಾಹ್ನ ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದಾಗ ಜೆಡಿಎಸ್ ಸದಸ್ಯರು ಧರಣಿ ಹಿಂತೆಗೆದುಕೊಂಡರು.
ಮತ್ತಷ್ಟು
ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತ
ಸಾವಿರ ರೈತರಿಗೆ ಚೀನಾ ಪ್ರವಾಸ ಯೋಗ
ಪದ್ಮಪ್ರಿಯಾ ಪ್ರಕರಣ ಸಿಓಡಿಗೆ
ಸ್ಫೋಟ ಸಂಚಿನ ಕಾರು ಗುಜರಿ ಅಂಗಡಿಯಲ್ಲಿ !
ಕಾಯಿನ್ ಬೂತ್ ಮಾಲೀಕರಿಗೆ ಇಲಾಖೆಯ ಎಚ್ಚರಿಕೆ
ಕುಚೇಲನ್ ವಿವಾದ: ರಜನಿಯಿಂದ ಪತ್ರ