ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಅನೇಕ ಜಲಾಶಯಗಳು ಭರ್ತಿಯಾಗಿವೆ. ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ ತುಸು ಹೆಚ್ಚಿದ್ದು, ಕುಮಾರಧಾರಾ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗಿದೆ.
ಹೊಸ್ಮಠ ಹಾಗೂ ಕುಮಾರಧಾರೆಯಲ್ಲಿ ಸೇತುವೆ ಮುಳುಗಿದೆ. ಮಂಡಗದ್ದೆ ಪಕ್ಷಿಧಾಮ ಜಲಾವೃತ್ತಗೊಂಡಿದೆ. ಕೊಡಗಿನಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದ್ದರೂ. ಅಗಸ್ಟ್ 2ರವರೆಗೆ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಮಧ್ಯೆ ಹೇಮಾವತಿ ಜಲಾಶಯ ಭರ್ತಿಗೆ 15 ಅಡಿಗಳಷ್ಟೇ ಬಾಕಿ ಉಳಿದಿದೆ. ಘಟಪ್ರಭಾ ಜಲಾಶಯಕ್ಕೆ ಮತ್ತೆ ಹೆಚ್ಚುವರಿ 3 ಅಡಿ ನೀರು ಹರಿದು ಬಂದಿದೆ. ದಕ್ಷಿಣ ಕನ್ನಡ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಭಾರಿ ಹಾನಿಯುಂಟಾಗಿದೆ.
ಮಂಗಳೂರಿನ ಹೊರವಲಯದ ಪ್ರದೇಶದಲ್ಲಿ ತಾತ್ಕಾಲಿಕ ಗುಡಿಸಲುಗಳು ನೇತ್ರಾವತಿ ನದಿಯ ನೆರೆಗೆ ಮುಳುಗಿ ಹೋಗಿದೆ. ಅಂತೆಯೇ, ಮೈಸೂರು, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ ಹಾಗೂ ಬೀದರ್‌ನಲ್ಲೂ ಉತ್ತಮ ಮಳೆಯಾಗಿದೆ.
|