ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುಚೇಲನ್ ವಿವಾದ-ಜಯಮಾಲಾ ವಿಷಾದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಚೇಲನ್ ವಿವಾದ-ಜಯಮಾಲಾ ವಿಷಾದ Search similar articles
ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ 'ಕುಚೇಲನ್' ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಟ ರಜನಿಕಾಂತ್ ಅವರನ್ನು ದೂರವಾಣಿ ಮೂಲಕ ಹಲವು ಸಂಪರ್ಕಿಸಿದ್ದೇನೆ, ಪ್ರತಿ ಬಾರಿಯೂ ಅವರು ಕ್ಷಮೆ ಕೋರಿರುವುದಾಗಿ ತಿಳಿಸಿದ್ದಾರೆ. ಇಷ್ಟಾದರೂ ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನು ಕೈಬಿಡದಿರುವ ಕುರಿತು ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.


ಕುಚೇಲನ್ ಚಿತ್ರ ಪ್ರದರ್ಶನ ವಿರುದ್ಧ ಕನ್ನಡ ಸಂಘಟನೆಗಳು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ನಡೆಸುತ್ತಿರುವ ಪ್ರತಿಭಟನೆ ವೇಳೆ ಆಗಮಿಸಿದ ಅವರು ಸಂಧಾನ ನಡೆಸಲು ಮುಂದಾದರು. ಆದರೆ ಅದಕ್ಕೆ ಒಪ್ಪದ ಕಾರ್ಯಕರ್ತರು ರಜನಿಕಾಂತ್ ಬಹಿರಂಗ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯಮಾಲಾ, ನಾನು ಕೂಡ ಕನ್ನಡದ ಹೆಣ್ಮಮಗಳು. ನನಗೂ ಕನ್ನಡದ ಬಗ್ಗೆ ಅಭಿಮಾನವಿದೆ. ಹೊಗೇನಕಲ್ ಯೋಜನೆ ವಿವಾದದ ಸಂದರ್ಭದಲ್ಲಿ ನಾನೂ ಕೂಡ ಕರ್ನಾಟಕ ಪರವಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದೇನೆ.

ಆದರೆ ಈಗ ರಜನಿಕಾಂತ್ ಕನ್ನಡಿಗರಲ್ಲಿ ಕ್ಷಮೆ ಕೋರುವುದಾಗಿ ಪತ್ರ ಬರೆದಿದ್ದಲ್ಲದೆ, ದೂರವಾಣಿ ಮೂಲಕವೂ ತಿಳಿಸಿದ್ದಾರೆ. ಆದ್ದರಿಂದ ಈ ಪ್ರತಿಭಟನೆಯನ್ನು ಕೈಬಿಡಬೇಕೆಂದು ಕನ್ನಡ ಸಂಘಟನೆಯಲ್ಲಿ ಮನವಿ ಮಾಡಿದರು.

ಈ ನಡುವೆ ವಾಟಾಳ್ ಪಕ್ಷದ ನಾಯಕ ಹಾಗೂ ಕನ್ನಡ ಹೋರಾಟಗಾರ ವಾಟಾಳ್ ನಾಗಾರಾಜ್, ಹೊಗೇನಕಲ್ ಕನ್ನಡದ ಅವಿಭಾಜ್ಯ ಅಂಗ. ಈ ಬಗ್ಗೆ ಅಂದು ರಜನಿಕಾಂತ್ ಕನ್ನಡಿಗರನ್ನು ಕೆರಳಿಸುವಂತಹ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು. ಅಲ್ಲಿಯವರೆಗೂ ಕರ್ನಾಟಕದಲ್ಲಿ ಕುಚೇಲನ್ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ. ಅಂತೆಯೇ ಮುಂದೆ ಹೊಗೇನಕಲ್ ವಿಚಾರದಲ್ಲಿ ರಜನಿಕಾಂತ್ ಭಾಗವಹಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು
ಆಗಸ್ಟ್‌ನಿಂದ ಲೋಡ್‌ ಶೆಡ್ಡಿಂಗ್ ರದ್ದು
ರಜನಿಕಾಂತ್ ಕ್ಷಮೆಯಾಚನೆಗೆ ಕರವೇ ಪಟ್ಟು
ಧಾರಾಕಾರ ಮಳೆಗೆ ಭರ್ತಿಗೊಂಡ ಜಲಾಶಯ
ಹೊಸ ಮದ್ಯದಂಗಡಿ ಪ್ರಸ್ತಾಪ ವಾಪಸ್: ಸಿಎಂ
ವಿವಿ ಅವ್ಯವಹಾರ - ತನಿಖೆಗೆ ಕ್ರಮ: ಸಿಎಂ
ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತ