ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಕುಚೇಲನ್' ಸಂಧಾನ ವಿಫಲ-ಮುಂದುವರಿದ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಕುಚೇಲನ್' ಸಂಧಾನ ವಿಫಲ-ಮುಂದುವರಿದ ಪ್ರತಿಭಟನೆ Search similar articles
ವಿಶ್ವಾದ್ಯಂತ ಶುಕ್ರವಾರ ಬಿಡುಗಡೆಗೊಳ್ಳಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕುಚೇಲನ್ ಚಿತ್ರಕ್ಕೆ ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ನೀಡುವುದಿಲ್ಲವೆಂದು ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿಸಿದ್ದಾರೆ.

ನಗರದ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರು ಸಂಘಟನೆಯ ಮುಖಂಡರೊಂದಿಗೆ ನಡೆಸಿದ ಸಂಧಾನ ವಿಫಲವಾಗಿದೆ.

ಕನ್ನಡಿಗರಲ್ಲಿ ಕ್ಷಮೆ ಕೋರಿರುವುದಾಗಿ ನಟ ರಜನಿಕಾಂತ್ ಹಲವು ಬಾರಿ ತಮಗೆ ತಿಳಿಸಿದ್ದು, ಪತ್ರ ಕೂಡ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಅವರ ಚಿತ್ರಕ್ಕೆ ಅವಕಾಶ ಮಾಡಿಕೊಡಬೇಕೆಂದು ಜಯಮಾಲಾ ಪ್ರತಿಭಟನಾಕಾರರಲ್ಲಿ ವಿನಂತಿಸಿಕೊಂಡರು.

ಆದರೆ ಅದಕ್ಕೆ ಜಗ್ಗದ ಕಾರ್ಯಕರ್ತರು ಬಹಿರಂಗವಾಗಿ ಕ್ಷಮೆ ಕೇಳುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಪಿವಿಆರ್, ಕಾವೇರಿ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಮುಂಗಡ ಬುಕ್ಕಿಂಗ್ ರದ್ದುಗೊಳಿಸಲು ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.
ಮತ್ತಷ್ಟು
ಕುಚೇಲನ್ ವಿವಾದ-ಜಯಮಾಲಾ ವಿಷಾದ
ಆಗಸ್ಟ್‌ನಿಂದ ಲೋಡ್‌ ಶೆಡ್ಡಿಂಗ್ ರದ್ದು
ರಜನಿಕಾಂತ್ ಕ್ಷಮೆಯಾಚನೆಗೆ ಕರವೇ ಪಟ್ಟು
ಧಾರಾಕಾರ ಮಳೆಗೆ ಭರ್ತಿಗೊಂಡ ಜಲಾಶಯ
ಹೊಸ ಮದ್ಯದಂಗಡಿ ಪ್ರಸ್ತಾಪ ವಾಪಸ್: ಸಿಎಂ
ವಿವಿ ಅವ್ಯವಹಾರ - ತನಿಖೆಗೆ ಕ್ರಮ: ಸಿಎಂ