ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತಪ್ಪಾಗಿದೆ ಎಂದ 'ಕುಚೇಲನ್'ಗೆ ಬಿಡುಗಡೆಗೆ ಅವಕಾಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಪ್ಪಾಗಿದೆ ಎಂದ 'ಕುಚೇಲನ್'ಗೆ ಬಿಡುಗಡೆಗೆ ಅವಕಾಶ Search similar articles
PTI
ಕನ್ನಡಿಗರ ಬಗ್ಗೆ ನನಗೆ ತುಂಬಾ ಗೌರವವಿದೆ, ನನ್ನಿಂದ ತಪ್ಪಾಗಿದೆ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ನಟ ರಜನಿಕಾಂತ್ ಹೇಳುವ ಮೂಲಕ ಕರ್ನಾಟಕದಲ್ಲಿ ಕುಚೇಲನ್ ಬಿಡುಗಡೆಗೆ ಮುನ್ನ ಎದ್ದಿರುವ ಅಸಮಾಧಾನ ಬಗೆಹರಿದಂತಾಗಿದೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಜನಿಕಾಂತ್, ಕನ್ನಡಿಗರಿಂದ ಹೊಸ ಪಾಠ ಕಲಿತಿದ್ದೇನೆ. ಮುಂದೆ ಇಂತಹ ತಪ್ಪುಗಳಿಗೆ ಅವಕಾಶ ನೀಡುವುದಿಲ್ಲ. ನಾಳೆ ಕುಚೇಲನ್ ಚಿತ್ರ ಬಿಡುಗಡೆಗೆ ಕನ್ನಡಿಗರು ಸಹಕರಿಸಬೇಕೆಂದು ಮನವಿ ಮಾಡಿದರು.

ನಾನು ದುರಹಂಕಾರಿ ಅಲ್ಲ, ಕನ್ನಡಿಗರ ಬಗ್ಗೆ ತಮಗೆ ಅಪಾರ ಗೌರವವಿದೆ. ಇಷ್ಟು ದೊಡ್ಡ ವ್ಯಕ್ತಿಯಾದರೂ ಕೂಡ ನಾನು ಮೂಲತಃ ಕಂಡಕ್ಟರ್ ಆಗಿರುವುದನ್ನು ನೆನಪಿನಲ್ಲಿಟ್ಟುಕೊಂಡೇ ಸಂತೋಷವಾಗಿ ಕಾಲ ಕಳೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಹೊಗೇನಕಲ್ ವಿವಾದದ ಸಂದರ್ಭದಲ್ಲಿ ಒದೆಯಿರಿ ಎಂದಿದ್ದು ಕನ್ನಡಿಗರಿಗಲ್ಲ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರಿಗೆ ಎಂದು ಅವರು ವಿವರಿಸಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಾಳೆ ಕುಚೇಲನ್ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ.

ಹೊಗೇನಕಲ್ ವಿವಾದದ ಸಂದರ್ಭದಲ್ಲಿ ನಟ ರಜನಿಕಾಂತ್ ಅವರು ಕನ್ನಡಿಗರನ್ನು ಅವಮಾನಿಸಿದ್ದರು ಆ ನಿಟ್ಟಿನಲ್ಲಿ ಅವರು ಕ್ಷಮೆ ಕೇಳಬೇಕು ಎಂದು ಕಳೆದ ಎರಡು ದಿನಗಳಿಂದ ವಿಶ್ವಾದ್ಯಂತ ಬಿಡುಗಡೆಗೆ ಸಿದ್ದವಾಗಿರುವ ಕುಚೇಲನ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿದ್ದವು.
ಮತ್ತಷ್ಟು
'ಕುಚೇಲನ್' ಸಂಧಾನ ವಿಫಲ-ಮುಂದುವರಿದ ಪ್ರತಿಭಟನೆ
ಕುಚೇಲನ್ ವಿವಾದ-ಜಯಮಾಲಾ ವಿಷಾದ
ಆಗಸ್ಟ್‌ನಿಂದ ಲೋಡ್‌ ಶೆಡ್ಡಿಂಗ್ ರದ್ದು
ರಜನಿಕಾಂತ್ ಕ್ಷಮೆಯಾಚನೆಗೆ ಕರವೇ ಪಟ್ಟು
ಧಾರಾಕಾರ ಮಳೆಗೆ ಭರ್ತಿಗೊಂಡ ಜಲಾಶಯ
ಹೊಸ ಮದ್ಯದಂಗಡಿ ಪ್ರಸ್ತಾಪ ವಾಪಸ್: ಸಿಎಂ