ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಜನಿ ಕ್ಷಮೆ ಕೇಳಿರುವುದು ಸಂತಸ: ಕರವೇ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಜನಿ ಕ್ಷಮೆ ಕೇಳಿರುವುದು ಸಂತಸ: ಕರವೇ Search similar articles
ಕುಚೇಲನ್ ವಿವಾದಕ್ಕೆ ಸಂಬಂಧಿಸಿದಂತೆ ನಟ ರಜನಿಕಾಂತ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿರುವುದು ತಮಗೆ ಸಂತಸ ತಂದಿದೆ. ಅಲ್ಲದೇ ಕ್ಷಮಿಸುವಂತಹ ದೊಡ್ಡಗುಣ ಕನ್ನಡಿಗರಲ್ಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ರಜನಿ ಕ್ಷಮೆಯನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಮತ್ತೊಂದು ಬಣದ ಪ್ರವೀಣ್ ಶೆಟ್ಟಿ, 5 ಕೋಟಿ ಕನ್ನಡಿಗರ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಗಡಿ ಸಮಿತಿ ಹೋರಾಟಗಾರರ ಜೊತೆ ಈ ಬಗ್ಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕ್ಷಮೆ ಕೇಳಿ ರಜನಿಕಾಂತ್ ದೊಡ್ಡತನ ಮೆರೆದಿದ್ದಾರೆ ಎಂದು ತಿಳಿಸಿದ ಕನ್ನಡದ ಹಿರಿಯ ನಟ ದ್ವಾರಕೀಶ್, ಈ ಬೆಳವಣಿಗೆಯಿಂದ ತಮಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಕುಚೇಲನ್ ಬಿಡುಗಡೆ ಬಹುತೇಕ ಖಚಿತವಾಗಿದ್ದು, ಚಿತ್ರಮಂದಿರಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.
ಮತ್ತಷ್ಟು
ತಪ್ಪಾಗಿದೆ ಎಂದ 'ಕುಚೇಲನ್'ಗೆ ಬಿಡುಗಡೆಗೆ ಅವಕಾಶ
'ಕುಚೇಲನ್' ಸಂಧಾನ ವಿಫಲ-ಮುಂದುವರಿದ ಪ್ರತಿಭಟನೆ
ಕುಚೇಲನ್ ವಿವಾದ-ಜಯಮಾಲಾ ವಿಷಾದ
ಆಗಸ್ಟ್‌ನಿಂದ ಲೋಡ್‌ ಶೆಡ್ಡಿಂಗ್ ರದ್ದು
ರಜನಿಕಾಂತ್ ಕ್ಷಮೆಯಾಚನೆಗೆ ಕರವೇ ಪಟ್ಟು
ಧಾರಾಕಾರ ಮಳೆಗೆ ಭರ್ತಿಗೊಂಡ ಜಲಾಶಯ