ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸೆ. 30: ದಸರಾ ಚಾಲನೆಗೆ ಸಿದ್ಧಗಂಗಾಶ್ರೀ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆ. 30: ದಸರಾ ಚಾಲನೆಗೆ ಸಿದ್ಧಗಂಗಾಶ್ರೀ Search similar articles
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 9ರವರೆಗೆ ನಡೆಯಲಿದ್ದು, ತುಮಕೂರಿನ ಸಿದ್ದಗಂಗಾ ಮಠಾಧೀಶ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ತೀರ್ಮಾನ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಆಚರಣೆಗೆ ರಾಜ್ಯ ಸರ್ಕಾರ 10 ಕೋಟಿ ರೂ. ನಿಗದಿಪಡಿಸಿದೆ. ಅಲ್ಲದೆ, ಖಾಸಗಿ ಸಹಭಾಗಿತ್ವ ಇದ್ದರೂ ಕೂಡ 2.50 ಕೋಟಿ ರೂ. ಅನುದಾನ ಬಳಸಲು ಸರ್ಕಾರ ನಿರ್ಧರಿಸಿದೆ.

ಅಂತೆಯೇ ಮೈಸೂರು ನಗರದ ಅಭಿವೃದ್ದಿ ಹಾಗೂ ಸೌಂದರ್ಯಕ್ಕಾಗಿ 7.50 ಕೋಟಿ ರೂ. ಅನುದಾನ ಒದಗಿಸಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ವಿಜಯ್ ಕುಮಾರ್, ಸಚಿವ ವಿಶ್ವೇಶ್ವರ ಕಾಗೇರಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಮತ್ತಷ್ಟು
ರಜನಿ ಕ್ಷಮೆ ಕೇಳಿರುವುದು ಸಂತಸ: ಕರವೇ
ತಪ್ಪಾಗಿದೆ ಎಂದ 'ಕುಚೇಲನ್'ಗೆ ಬಿಡುಗಡೆಗೆ ಅವಕಾಶ
'ಕುಚೇಲನ್' ಸಂಧಾನ ವಿಫಲ-ಮುಂದುವರಿದ ಪ್ರತಿಭಟನೆ
ಕುಚೇಲನ್ ವಿವಾದ-ಜಯಮಾಲಾ ವಿಷಾದ
ಆಗಸ್ಟ್‌ನಿಂದ ಲೋಡ್‌ ಶೆಡ್ಡಿಂಗ್ ರದ್ದು
ರಜನಿಕಾಂತ್ ಕ್ಷಮೆಯಾಚನೆಗೆ ಕರವೇ ಪಟ್ಟು