ಭೀಮನ ಅಮವಾಸ್ಯೆ ದಿನವಾದ ಶುಕ್ರವಾರ ಖಂಡಗ್ರಾಸ ಸೂರ್ಯಗ್ರಹಣ ಪ್ರಪಂಚದಾದ್ಯಂತ ಗೋಚರಿಸಲಿದ್ದು, ಭಾರತದ ವಿವಿಧೆಡೆ ಭಾಗಶಃ ಕಾಣಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು 1.34 ನಿಮಿಷಕ್ಕೆ ಪ್ರಾರಂಭವಾದ ಗ್ರಹಣ ಸಂಜೆ 6.08ಕ್ಕೆ ಮುಗಿಯಲಿದೆ.
ಬೆಂಗಳೂರಿನಲ್ಲಿ ಸಂಜೆ 4 ಗಂಟೆ 42 ನಿಮಿಷಕ್ಕೆ ಗ್ರಹಣ ಆರಂಭವಾಗಿ ಸಂಜೆ 6 ಗಂಟೆ 07 ನಿಮಿಷಕ್ಕೆ ಅಂತ್ಯಗೊಳ್ಳಲಿದೆ. ಆದರೆ ಕರ್ನಾಟಕದಲ್ಲಿ ಮೋಡದ ವಾತಾವರಣ ಇರುವ ಕಾರಣ ಸೂರ್ಯಗ್ರಹಣ ಗೋಚರಿಸುವುದು ಕಷ್ಟ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಒಂದು ವೇಳೆ ಆಕಾಶ ತಿಳಿ ಇದ್ದಲ್ಲಿ ಸೂರ್ಯಗ್ರಹಣ ಗೋಚರಿಸಬಹುದು. ಒಂದು ವೇಳೆ ಸೂರ್ಯಾಸ್ತದ ವೇಳೆ ಕಂಡರೂ ನೋಡದಿರುವುದೇ ಒಳಿತು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದೆಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕಣ್ಣಿನ ದೃಷ್ಟಿಪಟಲಕ್ಕೆ ದೋಷವುಂಟಾಗುವ ಸಾಧ್ಯತೆಗಳಿವೆಯೆಂದು ತಿಳಿಸಿದ್ದಾರೆ.
ಈ ನಡುವೆ ಜ್ಯೋತಿಷಿಗಳು ಕೂಡ ಇದರಿಂದಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿದ್ದಾರೆ. ಇದರಿಂದ ದೇಶದಲ್ಲಿ ಕೆಟ್ಟ ಪರಿಣಾಮಗಳು ಎದುರಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
|