ಕಾರಿನಲ್ಲಿ ಇಟ್ಟಿದ್ದ 54 ಲಕ್ಷ ರೂ.ಗಳಿದ್ದ ಸೂಟ್‌ಕೇಸ್ ಅನ್ನು ಚಾಲಕ ಅಪಹರಿಸಿರುವ ಘಟನೆ ಇಂದಿರಾನಗರದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ನಗರದ ಏರ್‌ಫೋರ್ಟ್ ರಸ್ತೆಯಲ್ಲಿರುವ ಟಾಟಾ ಫೈನಾನ್ಸ್‌ನಿಂದ ಹಣ ಪಡೆದುಕೊಂಡು ಇಂದಿರಾನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಬಂದಿದ್ದ ಎಪಿ ಸೆಕ್ಯೂರಿಟೀಸ್ ಹಣ ಸಂಗ್ರಹಗಾರ ರಾಧಾಕೃಷ್ಣ ಅವರು, ಕಾರಿನಿಂದ ಇಳಿದು ಬ್ಯಾಂಕಿನಿಂದ ಹಣ ಪಡೆಯಲು ತೆರಳಿದಾಗ, ಕಾರಿನ ಚಾಲಕ ಹಣವಿದ್ದ ಸೂಟ್‌ಕೇಸ್‌ನೊಂದಿಗೆ ವಾಹನ ಸಮೇತ ಪರಾರಿಯಾಗಿದ್ದಾನೆ.
ಕೂಡಲೇ ರಾಧಾಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಇಂದಿರಾನಗರದ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಇಂದಿರಾನಗರದ 13ನೇ ರಸ್ತೆಯಲ್ಲಿ ಕಾರು ಪತ್ತೆಯಾಗಿದೆ. ಆದರೆ ಚಾಲಕ ಹಣದೊಂದಿಗೆ ಪರಾರಿಯಾಗಿದ್ದಾನೆ.
|