ರಾಜ್ಯರಾಜಕಾರಣದಲ್ಲಿ 'ಶಾಸಕರ ಖರೀದಿ' ಇನ್ನೂ ನಿಂತಿಲ್ಲ, ಇದೀಗ ಜೆಡಿಎಸ್‌ನ ಪ್ರಭಾವಿ ನಾಯಕ ಸಿ.ಚೆನ್ನಿಗಪ್ಪ ಅವರನ್ನು ಬಿಜೆಪಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಶೀಘ್ರವೇ ಅವರು ಪಕ್ಷವನ್ನು ಸೇರಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರುಗಳು ಚನ್ನಿಗಪ್ಪ ಅವರೊಂದಿಗೆ ಯಶಸ್ವಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುವ ನಿರೀಕ್ಷೆ ಇದೆ.
ಅಲ್ಲದೆ, ಜೆಡಿಎಸ್‌ನ ಹಾಲಿ ಶಾಸಕರಾದ ಗೌರಿ ಶಂಕರ್, ಎಸ್.ಆರ್. ಶ್ರೀನಿವಾಸ್, ಸುರೇಶ್ ಬಾಬು ಅವರೂ ಕೂಡ ಬಿಜೆಪಿ ಸೇರಲು ಉತ್ಸುಹಕರಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಬಾಲಚಂದ್ರ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್‌ನ ಭದ್ರಕೋಟೆಯಾಗಿರುವ ತುಮಕೂರಿನ ಶಾಸಕರು ಬಿಜೆಪಿಯತ್ತ ಒಲವು ತೋರಿಸುತ್ತಿರುವುದು ಜೆಡಿಎಸ್‌ಗೆ ಬಹುದೊಡ್ಡ ಆಘಾತವಾಗಿದೆ.
|