ರಾಜ್ಯದ 15 ಲಕ್ಷ ರೈತರಿಗೆ ಉಚಿತ ವಿದ್ಯುತ್ ನೀಡಲು ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡುವುದರೊಂದಿಗೆ, ಕೊನೆಗೂ ಪ್ರಣಾಳಿಕೆ ತಿಳಿಸಲಾಗಿರುವ ಮಹತ್ವದ ಅಂಶ ಇಂದಿನಿಂದ ಜಾರಿಗೆ ಬಂದಂತಾಗಿದೆ.
ಹತ್ತು ಎಚ್‌ಪಿ ನೀರಾವರಿ ಪಂಪ್‌ಸೆಟ್‌ಗಳಿಗೆ ನಾಳೆಯಿಂದ ಕೆಲವು ಷರತ್ತುಗಳಿಗೆ ಒಳಪಟ್ಟಂತೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ವಿದ್ಯುತ್ ಕಡಿತವನ್ನು ಶೇ.5ರಷ್ಟು ಕಡಿಮೆ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಇದೇ ವೇಳೆ ರಾಜ್ಯದ ಎಲ್ಲಾ ಕೃಷಿ ಪಂಪ್‌ಸೆಟ್‌ಗಳಿಗೂ ಮೀಟರ್ ಅನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ ಅಳವಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮೀಟರ್ ಅಳವಡಿಸಿದರೂ ದರ ನಿಗದಿ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರೈತರು ಈ ತಿಂಗಳ ಅಂತ್ಯದ ತನಕ ಉಳಿಸಿಕೊಂಡಿರುವ ಬಾಕಿಯನ್ನು ಹಂತಹಂತವಾಗಿ ಕಟ್ಟಲು ಸರ್ಕಾರ ತಿಳಿಸಿದೆ.
|