ತೈಲ ಬೆಲೆ ಹೆಚ್ಚಳದಿಂದಾಗಿ ಸಾರಿಗೆ ನಿಗಮದ ನಾಲ್ಕು ವಿಭಾಗಗಳಿಗೆ ವರ್ಷಕ್ಕೆ 150 ಕೋಟಿ ರೂ. ಹೊರೆ ಬೀಳುತ್ತಿದ್ದು, ಆ ನಿಟ್ಟಿನಲ್ಲಿ ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಸಾರಿಗೆ ಸಚಿವ ಆರ್.ಅಶೋಕ್ ಪರೋಕ್ಷ ಸೂಚನೆ ನೀಡಿದ್ದಾರೆ.
ಈ ಹೊರೆ ತಗ್ಗಿಸಲು ಬಸ್ ಪ್ರಯಾಣ ದರ ಹೆಚ್ಚಿಸುವುದರಿಂದ ಉಂಟಾಗುವ ಸಾಧಕ ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಮುಂದಿನ ಕ್ರಮ ಕೈಗೊಳ್ಳ ಲಾಗುವುದು ಎಂದು ಅಶೋಕ್ ತಿಳಿಸಿದ್ದಾರೆ.
ಕಳೆದ 2 ವರ್ಷಗಳಲ್ಲಿ ಐದು ಬಾರಿ ಇಂಧನ ದರ ಹೆಚ್ಚಾಗಿದೆ. ಪ್ರತಿ ಸಲವೂ ಪ್ರಯಾಣ ದರವನ್ನೂ ಸಾರಿಗೆ ಸಂಸ್ಥೆ ಹೆಚ್ಚಿಸಿದೆ. ಆದರೆ ಜೂ.5 ರಂದು ಇಂಧನ ದರ ಹೆಚ್ಚಳವಾದ ನಂತರ ಈವರೆಗೆ ಬಸ್ ಪ್ರಯಾಣ ದರ ಏರಿಸಿಲ್ಲ.
ಈ ಹಿಂದೆ ನಿಗಮಕ್ಕೆ 450 ಕೋಟಿ ರೂ. ಹೊರೆಯಾಗಿತ್ತು. ಆದರೆ ಮುಖ್ಯಮಂತ್ರಿ ಮಂಡಿಸಿದ ಬಜೆಟ್‌ನಲ್ಲಿ ನಿಗಮ ಸರ್ಕಾರಕ್ಕೆ ನೀಡಬೇಕಾದ ತೆರಿಗೆಯನ್ನು 5 ಕ್ಕೆ ಇಳಿಸಿದ್ದರಿಂದ ಆರ್ಥಿಕ ಹೊರೆ 150 ಕೊಟಿ ರೂ.ಗೆ ಇಳಿದಿದೆ ಎಂದರು.
|