ಗ್ರಹಣದ ಸಂದರ್ಭದಲ್ಲಿ ಏನು ತಿನ್ನಬಾರದು, ತಿಂದರೆ ಅದು ವಿಷವಾಗುತ್ತದೆ ಎಂಬ ಮೂಢನಂಬಿಕೆಯನ್ನು ಹೋಗಲಾಡಿಸಲು ಶುಕ್ರವಾರ ನಗರದಲ್ಲಿ ಬುದ್ದಿಜೀವಿಗಳ ತಂಡವೊಂದು ಗ್ರಹಣ ಆರಂಭವಾಗುತ್ತಿದ್ದಂತೆ ಕಡ್ಲೆಪುರಿ ತಿನ್ನಲಾರಂಭಿಸಿತು.
ನಗರದ ನ್ಯಾಷನಲ್ ಕಾಲೇಜು ಅವರಣದಲ್ಲಿ ಈ ತಂಡ ಕಡ್ಲೆಪುರಿ ತಿಂದು ಮೂಢನಂಬಿಕೆ ವಿರೋಧಿಸಿ ಎಂಬ ಸಂದೇಶದೊಂದಿಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿತು.
ಸೂರ್ಯಗ್ರಹಣ ಆರಂಭವಾಗುತ್ತಿದ್ದಂತೆ ಕಡ್ಲೆಪುರಿ ತಿನ್ನಲಾರಂಭಿಸಿದ ತಂಡ , ಗ್ರಹಣ ಕಾಲದಲ್ಲಿ ತಿನ್ನಬಾರದು ಎನ್ನುತ್ತಾರೆ. ಆದರೆ ನಾವು ಇಲ್ಲಿ ಕಡ್ಲೆಪುರಿ ತಿನ್ನುತ್ತಿದ್ದೇವೆ. ಜನರ ನಂಬಿಕೆ ನಿಜವಾದರೆ ನಾವು ತಿನ್ನುವ ಕಡ್ಲೆಪುರಿ ವಿಷವಾಗಲಿ ಎಂದು ಸವಾಲು ಹಾಕಿತು.
|