ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಯೋತ್ಪಾದನಾ ನಿಗ್ರಹಕ್ಕೆ 'ಕೊಕಾ' ಜಾರಿ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನಾ ನಿಗ್ರಹಕ್ಕೆ 'ಕೊಕಾ' ಜಾರಿ: ಸಿಎಂ Search similar articles
ಸಿಲಿಕಾನ್ ಸಿಟಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ರಾಜ್ಯದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆ ಕಠಿಣ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು,ಕೊಕಾ(ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಕಾಯ್ದೆಯನ್ನು ಜಾರಿಗೆ ತರುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಕೊಕಾ ಕಾಯ್ದೆಯನ್ವಯ ಶಂಕಿತ ಆರೋಪಿಯನ್ನು ವಾರೆಂಟ್ ಇಲ್ಲದೆ ಬಂಧಿಸುವುದಲ್ಲದೆ, ನ್ಯಾಯಾಲಯಕ್ಕೆ 6ತಿಂಗಳ ಕಾಲ ಹಾಜರುಪಡಿಸದೆ ಜೈಲಿನಲ್ಲಿ ಹಿಡಿದಿಟ್ಟುಕೊಳ್ಳ ಬಹುದಾಗಿದೆ.

ಅಲ್ಲದೇ ಲೀಸ್ ಇಲಾಖೆಯ ಆಧುನೀಕರಣಕ್ಕೆ 122 ಕೋಟಿ ರೂ. ನೀಡಲಾಗಿದೆ. ಅಂತೆಯೇ, ಪೊಲೀಸರ ವಸತಿ ಸಮುಚ್ಛಯಗಳ ದುರಸ್ಥಿಗೆ 45 ಕೋಟಿ ರೂ. ನೀಡಲಾಗುವುದು ಎಂದು ನಗರದಲ್ಲಿ ಶನಿವಾರ ಕಾನೂನು ಸುವ್ಯವಸ್ಥೆ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಗಳ ಸಭೆಯಲ್ಲಿ ಮಾತನಾಡುತ್ತ ತಿಳಿಸಿದರು.

ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಬಾಂಬ್ ಸ್ಫೋಟದ ಕುರಿತು ವಿಶ್ಲೇಷಿಸಿದಾಗ ನಮ್ಮ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಕೊರತೆಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ಆಗಬೇಕಾದ ಸುಧಾರಣೆ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಅವರು ಸಲಹೆ ನೀಡಿದರು.

ಗುಪ್ತವಾರ್ತೆ ಮತ್ತು ವಿಚಕ್ಷಣಾ ವಿಭಾಗಗಳ ಕಾರ್ಯವೈಖರಿಯಲ್ಲಿ ಗಣನೀಯ ಸುಧಾರಣೆ ಆಗಬೇಕಾಗಿದೆ. ಅಲ್ಲದೆ, ಸಿಬ್ಬಂದಿ ಆಯ್ಕೆಯಲ್ಲಿ ದಕ್ಷರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಪೊಲೀಸರಿಗೆ ಅವಶ್ಯವಿರುವ ವಾಹನ, ಶಸ್ತ್ರಾಸ್ತ್ರ ಖರೀದಿಗೆ ಇನ್ನು ಹೆಚ್ಚಿನ ಹಣ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಅವರು ತಿಳಿಸಿದರು.

ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಮಾಜಘಾತ ಶಕ್ತಿಗಳ ವಿರುದ್ಧ ತೀವ್ರ ನಿಗಾ ಇರಿಸಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಹೇಳಿದರು. ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಶಂಕಿತ ನಕ್ಸಲೀಯನಿಂದ ಬೃಹತ್ ಪ್ರಮಾಣದಲ್ಲಿ ಸ್ಫೋಟಕ, ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಕರಾವಳಿಗೆ ಪ್ರದೇಶಗಳಿಗೆ ಒತ್ತು:

ಉಗ್ರರು ಕರಾವಳಿ ಪ್ರದೇಶಗಳ ಮೂಲಕ ರಾಜ್ಯ ಪ್ರವೇಶಿಸುವ ಬಗ್ಗೆ ಮಾಹಿತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳ ಭದ್ರತೆಗಾಗಿ 2 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಪ್ರಯಾಣ ದರ ಏರಿಕೆ ಇಲ್ಲ: ಅಶೋಕ್
ವಿಧಾನಪರಿಷತ್ ಸಭಾಪತಿ ಪಟ್ಟ ಯಾರಿಗೆ ?
ಪ್ರತಿ ಜಿಲ್ಲೆಗೂ ವಿಮಾನಯಾನ ಸೌಲಭ್ಯ: ಸಿಎಂ
ಉದ್ಯಾನನಗರಿಗೆ ಬಿಸಿ ಮುಟ್ಟಿಸಿದ 'ಗ್ರಹಣ'
ಕೆಪಿಸಿಸಿ ಅಧ್ಯಕ್ಷಗಾದಿ: ದೆಹಲಿಯಲ್ಲಿ ಡಿಕೆಶಿ
ಕ್ಷಮೆ ಕೇಳಿಲ್ಲ: ಮತ್ತೆ 'ಕುಚೇಲನ್' ವಿವಾದ