ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉದ್ಯಾನನಗರಿ ಸ್ಫೋಟ: ಭಟ್ಕಳ ಉಗ್ರನ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯಾನನಗರಿ ಸ್ಫೋಟ: ಭಟ್ಕಳ ಉಗ್ರನ ಸೆರೆ Search similar articles
ಸಿಲಿಕಾನ್ ಸಿಟಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಟ್ಕಳದಲ್ಲಿ ಉಗ್ರನೊಬ್ಬನನ್ನು ಸೆರೆ ಹಿಡಿದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ರಾತ್ರಿ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಟ್ಕಳ ಗೌಸಿಯಾ ಸ್ಟ್ರೀಟ್‌ನ ನಿವಾಸಿ ಸಲೀಂ ಮಹ್ಮದ್ ಗೌಸ್ ಮುಜಾವರ್ (35) ಎಂಬುವವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಹೆಚ್ಚಿನ ತನಿಖೆಗೆಗಾಗಿ ನ್ಯಾಯಾಲಯ ಆತನನ್ನು ಪೊಲೀಸರ ವಶಕ್ಕೆ ನೀಡಿದೆ. ಅಲ್ಲದೇ 1993ರಲ್ಲಿ ಆರು ತಿಂಗಳ ಕಾಲ ಹೊತ್ತಿ ಉರಿದ ಕೋಮು ಗಲಭೆ, 1996ರ ಏಪ್ರಿಲ್ 10ರಂದು ನಡೆದ ಶಾಸಕ ಚಿತ್ತರಂಜನ್ ಹತ್ಯೆ ಮತ್ತು ಗಲಭೆಯ ಸಂದರ್ಭದಲ್ಲಿ ಗೌಸ್ ಮನೆಯಲ್ಲಿ ಬಾಂಬ್ ಸ್ಫೋಟಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ಕಳೆದ 12ವರ್ಷಗಳಿಂದ ಅಜ್ಞಾತವಾಗಿದ್ದ ಗೌಸ್ ಈವರೆಗೆ ಎಲ್ಲಿದ್ದ, ಯಾವೆಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ, ಯಾವ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬುದರ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು
ಶಂಕಿತ ಉಗ್ರನಿಗೆ ಆ.8ರವರೆಗೆ ನ್ಯಾಯಾಂಗ ಬಂಧನ
ಕೆಪಿಸಿಸಿ 'ಕುರ್ಚಿ' ಮೇಲೆ ಡಿಕೆಶಿ ಕಣ್ಣು
ಸಭಾಪತಿ ಚುನಾವಣೆಗಾಗಿ ಮಾತ್ರ ಮೈತ್ರಿ: ಜೆಡಿಎಸ್
ವಿಧಾನಪರಿಷತ್ ಚುನಾವಣೆಗೆ ಅಖಾಡ ಸಜ್ಜು
ಬೀದರ್: ಮಳೆಗೆ ಮನೆ ಕುಸಿದು 3 ಬಲಿ
ಮಂಗಳೂರು: ಲಾಠಿ ಪ್ರಹಾರಕ್ಕೆ ಸಿಪಿಎಂ ಖಂಡನೆ