ಜೆಡಿಎಸ್ ತೊರೆಯಲು ಸಜ್ಜಾಗಿರುವ ಮಾಜಿ ಸಚಿವ ಸಿ. ಚನ್ನಿಗಪ್ಪ, ತಮ್ಮ ಪುತ್ರನಿಗೆ ಸೂಕ್ತ ರಾಜಕೀಯ ವೇದಿಕೆ ಕಲ್ಪಿಸಿ ರಾಜಕೀಯದಿಂದ ನಿವೃತ್ತರಾಗುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿಚಾರದ ಬಗ್ಗೆ ಇದೇ ತಿಂಗಳು 22ರಂದು ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಿಜೆಪಿಗೆ ಮುಖ್ಯಮಂತ್ರಿ ಪದವಿ ನೀಡದೆ ದ್ರೋಹ ಎಸಗಿದ್ದಾರೆ. ಇದರಿಂದಲೇ ಜೆಡಿಎಸ್ ನೆಲಕಚ್ಚಲು ಕಾರಣವಾಗಿದೆ ಎಂದು ಆರೋಪಿಸಿದರು.
ಮಾತಿನುದ್ದಕ್ಕೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ವಿರುದ್ಧ ಕಿಡಿಕಾರಿದ ಚನ್ನಿಗಪ್ಪ, ನನ್ನ ಸಂಸ್ಥೆ ಕಾರ್ಯಕ್ರಮಗಳಿಗೆ ಕುಮಾರಸ್ವಾಮಿ ಬಾರದಂತೆ ದೇವೇಗೌಡರು ತಡೆ ಹಿಡಿದಿದ್ದರು. ಅಲ್ಲದೆ, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಬಿಜೆಪಿಗೆ ಪದವಿ ನೀಡಿರಲಿಲ್ಲ. ಇದರಿಂದ ಗೌಡರು ಮೋಸ ಮಾಡಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿದ್ದರಿಂದ ಚುನಾವಣೆಯಲ್ಲಿ ಪಕ್ಷ ಸೋಲಬೇಕಾಯಿತು ಎಂದು ಆರೋಪಿಸಿದರು.
|