ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದತ್ತಪೀಠ: ಸರ್ಕಾರದ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದತ್ತಪೀಠ: ಸರ್ಕಾರದ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್ Search similar articles
ವಿವಾದಿತ ದತ್ತಪೀಠದಲ್ಲಿ ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿ ಪೂಜಾಚರಣೆ ನಡೆಸುವಂತೆ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಹೈಕೋರ್ಟ್‌‌ನ ದ್ವಿಸದಸ್ಯ ಪೀಠ ಸೋಮವಾರ ಎತ್ತಿ ಹಿಡಿದಿದೆ.

2007ರಂದು ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿ ದೀಪಕ್ ವರ್ಮಾ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ತಳ್ಳಿ ಹಾಕಿದೆ.

ಜತೆಗೆ ದತ್ತಪೀಠದಲ್ಲಿ ಎರಡೂ ಕೋಮಿನವರ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಪೂಜಾಚರಣೆಗೆ ಅವಕಾಶ ಮಾಡಿಕೊಡುವಂತೆ ಧಾರ್ಮಿಕ ದತ್ತಿ ಇಲಾಖೆಗೆ ಹೈಕೋರ್ಟ್ ಆದೇಶ ನೀಡಿದೆ.

ಈ ಹಿಂದೆ ದತ್ತಪೀಠದಲ್ಲಿ ಹಿಂದೂ ಧಾರ್ಮಿಕ ಆಚರಣೆಗೆ ಅನುವು ಮಾಡಲು ಸೂಚಿಸಿದ್ದ ಹೈಕೋಟನ ಏಕಸದಸ್ಯ ಪೀಠ, ಅಗತ್ಯ ಬಿದ್ದರೆ ಅರ್ಚಕರ ನೇಮಕ ಮಾಡಿಕೊಳ್ಳುವಂತೆ ಧಾರ್ಮಿಕ ದತ್ತಿಗೆ ಸೂಚನೆ ನೀಡಿತ್ತು.

ಆದರೆ ಈ ಆದೇಶ ಪ್ರಶ್ನಿಸಿ ಆಗಿನ ಸರ್ಕಾರ ಮೇಲ್ಮನವಿ ಸಲ್ಲಿಸಿರುವುದನ್ನು ವಿಚಾರಣೆಗೊಳಪಡಿಸಿದ ನ್ಯಾಯಾಲಯ, ಏಕಸದಸ್ಯ ಪೀಠದ ತೀರ್ಪಿನಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿಲ್ಲ ಎಂದು ಹೇಳಿ ಮನವಿಯನ್ನು ಅನೂರ್ಜಿತಗೊಳಿಸುವುದಾಗಿ ತಿಳಿಸಿದೆ.
ಮತ್ತಷ್ಟು
ರಾಜಕೀಯ ನಿವೃತ್ತಿಗೆ ಚನ್ನಿಗಪ್ಪ ನಿರ್ಧಾರ
ಉದ್ಯಾನನಗರಿ ಸ್ಫೋಟ: ಭಟ್ಕಳ ಉಗ್ರನ ಸೆರೆ
ಶಂಕಿತ ಉಗ್ರನಿಗೆ ಆ.8ರವರೆಗೆ ನ್ಯಾಯಾಂಗ ಬಂಧನ
ಕೆಪಿಸಿಸಿ 'ಕುರ್ಚಿ' ಮೇಲೆ ಡಿಕೆಶಿ ಕಣ್ಣು
ಸಭಾಪತಿ ಚುನಾವಣೆಗಾಗಿ ಮಾತ್ರ ಮೈತ್ರಿ: ಜೆಡಿಎಸ್
ವಿಧಾನಪರಿಷತ್ ಚುನಾವಣೆಗೆ ಅಖಾಡ ಸಜ್ಜು