ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿಧಾನಪರಿಷತ್‌ ಸಭಾಪತಿಯಾಗಿ ವೀರಣ್ಣ ಅವಿರೋಧ ಆಯ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಧಾನಪರಿಷತ್‌ ಸಭಾಪತಿಯಾಗಿ ವೀರಣ್ಣ ಅವಿರೋಧ ಆಯ್ಕೆ Search similar articles
ವಿಧಾನಪರಿಷತ್‌ನ ಸಭಾಪತಿಯಾಗಿ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ ಅವರು ಮಂಗಳವಾರದಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸಿದ ಪರಿಣಾಮ ಸಭಾಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸುವ ಮೂಲಕ 75 ಮಂದಿ ಸದಸ್ಯ ಬಲದ ವಿಧಾನಪರಿಷತ್‌ನಲ್ಲಿ ಅವರ ಅಭ್ಯರ್ಥಿಯೇ ಮೇಲುಗೈ ಸಾಧಿಸಿರುವುದು ಖಚಿತಪಡಿಸಿಕೊಂಡ ಹಂಗಾಮಿ ಸಭಾಪತಿ ತಿಪ್ಪಣ್ಣ ಅವರು, ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರ ನಾಮಪತ್ರವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿಕೊಂಡರು.

ತಿಪ್ಪಣ್ಣ ಅವರ ಮನವಿಯ ಮೇರೆಗೆ ನಾಮಪತ್ರ ನಮೋಶಿ ವಾಪಸ್ ಪಡೆದ ಬಳಿಕ, ಮತ್ತಿಕಟ್ಟಿ ಅವರನ್ನು ಸಭಾಪತಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದರು.

ಈ ನಿಟ್ಟಿನಲ್ಲಿ ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕಾಗಿ ಮಂಗಳವಾರ ನಡೆಯಬೇಕಿದ್ದ ಚುನಾವಣೆ, ಅವಿರೋಧ ಆಯ್ಕೆಯಿಂದ ಸುಲಭವಾಗಿ ನೆರವೇರಿದಂತಾಗಿದೆ.

ನಾಣಯ್ಯ ಉಸಭಾಪತಿ ?

ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯಂತೆ ಅವಿರೋಧ ಆಯ್ಕೆ ನಡೆದಿದ್ದು, ಇದೀಗ ಉಪಸಭಾಪತಿ ಹುದ್ದೆ ಜೆಡಿಎಸ್‌ಗೆ ಎಂಬುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಆ ನಿಟ್ಟಿನಲ್ಲಿ ಉಪಸಭಾಪತಿಯಾಗಿ ಜೆಡಿಎಸ್‌ನ ಬಸವರಾಜ್ ಹೊರಟ್ಟಿ ಅಥವಾ ಎಂ.ಸಿ.ನಾಣಯ್ಯ ಅವರ ಹೆಸರು ಕೇಳಿಬರುತ್ತಿದೆ. ಅಂತಿಮವಾಗಿ ಉಪಸಭಾಪತಿ ಪಟ್ಟ ಯಾರಿಗೆ ಒಲಿಯಲಿದೆ ಎಂಬುದು ಕುತುಹಲಕ್ಕೆ ಎಡೆಮಾಡಿಕೊಟ್ಟಿದೆ.
ಮತ್ತಷ್ಟು
ದತ್ತಪೀಠ: ಸರ್ಕಾರದ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್
ರಾಜಕೀಯ ನಿವೃತ್ತಿಗೆ ಚನ್ನಿಗಪ್ಪ ನಿರ್ಧಾರ
ಉದ್ಯಾನನಗರಿ ಸ್ಫೋಟ: ಭಟ್ಕಳ ಉಗ್ರನ ಸೆರೆ
ಶಂಕಿತ ಉಗ್ರನಿಗೆ ಆ.8ರವರೆಗೆ ನ್ಯಾಯಾಂಗ ಬಂಧನ
ಕೆಪಿಸಿಸಿ 'ಕುರ್ಚಿ' ಮೇಲೆ ಡಿಕೆಶಿ ಕಣ್ಣು
ಸಭಾಪತಿ ಚುನಾವಣೆಗಾಗಿ ಮಾತ್ರ ಮೈತ್ರಿ: ಜೆಡಿಎಸ್