ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರಾಗಿ 'ಪ್ರಭಾವಿ' ಮುಖಂಡ ಡಿ.ಕೆ.ಶಿವಕುಮಾರ್ ಅವರ ಆಯ್ಕೆ ಖಚಿವಾಗಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ರಾಜ್ಯರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷಗಾದಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂಬ ಘೋಷಣೆ ಹೊರಬಿದ್ದ ಕೂಡಲೇ, ಡಿಕೆಶಿ ದೆಹಲಿಯತ್ತ ಪ್ರಯಾಣಿಸಿದ್ದರು.
ತಮ್ಮ ಆಪ್ತರಾದ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮತ್ತೊಮ್ಮೆ ತಮ್ಮ ಶಿಷ್ಯನಿಗೆ ಪಟ್ಟ ಗಿಟ್ಟಿಸಲು ಪಾಂಚಜನ್ಯ ಊದುವ ಮೂಲಕ ಡಿಕೆಶಿ ಹಾದಿಯನ್ನು ಸುಗಮಗೊಳಿಸಿರುವುದಾಗಿ ರಾಜಕಾರಣದ ಪಡಸಾಲೆಯಿಂದ ಗುಸುಗುಸು ಕೇಳಿ ಬರುತ್ತಿದೆ.
ಆ ನಿಟ್ಟಿನಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ ಎಐಸಿಸಿ ಕೂಡ ನೂತನ ಸೂತ್ರವನ್ನು ಅನುಸರಿಸುವ ನಿಟ್ಟಿನಲ್ಲಿ ಯುವ ಮುಖಂಡರ ಆಯ್ಕೆಗೆ ಒಲವು ತೋರಿದೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಡಿಕೆಶಿ ಅವರ ಆಯ್ಕೆಯನ್ನು ನಾಳೆ ಎಐಸಿಸಿ ಅಧಿಕೃತವಾಗಿ ಘೋಷಿಸಲಿದೆ.
ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಪಟ್ಟದಿಂದ ಕೆಳಗಿಳಿಯಲು ಸಿದ್ದರಾಗಿದ್ದು, ಡಿಕೆಶಿ ಆಯ್ಕೆ ಖಚಿವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದರೆ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಬಂದಿದ್ದ ಸಿದ್ದರಾಮಯ್ಯನವರ ಸ್ಥಿತಿ ಏನು ಎಂಬುದು ಕಾದು ನೋಡಬೇಕಾಗಿದೆ.
|