ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಕಲಿ ರಸಗೊಬ್ಬರ ತಯಾರಿಕ ಘಟಕ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕಲಿ ರಸಗೊಬ್ಬರ ತಯಾರಿಕ ಘಟಕ ಪತ್ತೆ Search similar articles
ಮಂಡ್ಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ನಕಲಿ ರಸಗೊಬ್ಬರ ತಯಾರಿಸುತ್ತಿದ್ದ ಘಟಕವನ್ನು ಪತ್ತೆ ಹಚ್ಚಿದ ಪೊಲೀಸರು, ಅದರ ರೂವಾರಿ ಮಂಡ್ಯದ ಕಿರಗಂದೂರಿನ ಕೃಷ್ಣ ಎಂಬಾತನನ್ನು ಮಂಗಳವಾರ ಬಂಧಿಸಿದ್ದಾರೆ.

ಕೆಎಂಕೆ ಟ್ರೇಡರ್ಸ್ ಮಾಲೀಕನಾದ ಈತ ನಕಲಿಯಾಗಿ ತಯಾರಿಸುತ್ತಿದ್ದ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ಪೊಲೀಸರು, 300 ಚೀಲ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ. ನಗರದ ಜೈ ಶಂಕರ್ ರೈಸ್ ಮಿಲ್‌ನಲ್ಲಿ ನಕಲಿ ರಸಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಸುಳಿವಿನ ಆಧಾರದ ಮೇಲೆ ನಕಲಿ ರಸಗೊಬ್ಬರ ತಯಾರಿಕಾ ಘಟಕ ಪತ್ತೆ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ರಸಗೊಬ್ಬರದ ಅಭಾವ ಎದುರಾಗುತ್ತಿದೆ. ಅಂತೆಯೇ ರಸಗೊಬ್ಬರದ ಬೇಡಿಕೆಯೂ ಹೆಚ್ಚುತ್ತಿರುವ ಸಂದರ್ಭವನ್ನು ಉಪಯೋಗಿಸಿಕೊಂಡ ಈತ ಕಳೆದ ಕೆಲವು ದಿನಗಳಿಂದ ನಕಲಿ ರಸಗೊಬ್ಬರ ತಯಾರಿಕೆಯಲ್ಲಿ ತೊಡಗಿದ್ದ.
ಮತ್ತಷ್ಟು
ಕೆಪಿಸಿಸಿ ಪಟ್ಟಕ್ಕೆ 'ಡಿಕೆಶಿ' ಆಯ್ಕೆ ಖಚಿತ
ವಿಧಾನಪರಿಷತ್‌ ಸಭಾಪತಿಯಾಗಿ ವೀರಣ್ಣ ಅವಿರೋಧ ಆಯ್ಕೆ
ದತ್ತಪೀಠ: ಸರ್ಕಾರದ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್
ರಾಜಕೀಯ ನಿವೃತ್ತಿಗೆ ಚನ್ನಿಗಪ್ಪ ನಿರ್ಧಾರ
ಉದ್ಯಾನನಗರಿ ಸ್ಫೋಟ: ಭಟ್ಕಳ ಉಗ್ರನ ಸೆರೆ
ಶಂಕಿತ ಉಗ್ರನಿಗೆ ಆ.8ರವರೆಗೆ ನ್ಯಾಯಾಂಗ ಬಂಧನ