ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸ್ವಯಂ ವಾದ ಮಂಡಿಸುವೆನೆಂದ ಉಗ್ರ ಫಹಾದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ವಯಂ ವಾದ ಮಂಡಿಸುವೆನೆಂದ ಉಗ್ರ ಫಹಾದ್ Search similar articles
ಎರಡು ವರ್ಷಗಳ ಹಿಂದೆ ನಗರದಲ್ಲಿ ಸೆರೆ ಸಿಕ್ಕ ಪಾಕ್ ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಹುಸೇನ್‌ನನ್ನು ವಿಚಾರಣೆಗಾಗಿ ಮಂಗಳವಾರ ಮೈಸೂರಿನ 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಉಗ್ರರಿಗೆ ಸಹಾಯ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮೈಸೂರಿನ ಕಾರಾಗೃಹದಲ್ಲಿರುವ ಆರು ಮಂದಿಯನ್ನು ಕೂಡ ಇದೇ ಸಂದರ್ಭದಲ್ಲಿ ವಿಚಾರಣೆಗೆ ಹಾಜರು ಪಡಿಸಲಾಯಿತು.

ಬೆಂಗಳೂರಿನ ವಿಧಾನಸೌಧ, ವಿಕಾಸ ಸೌಧ, ಕೆಆರ್ಎಸ್ ಸೇರಿದಂತೆ ಹಲವು ಕಡೆಗಳಲ್ಲಿ ಸ್ಫೋಟ ನಡೆಸುವ ಸಂಚು ರೂಪಿಸಿದ್ದಾರೆಂಬ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಆದರೆ ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಸಂದರ್ಭದಲ್ಲಿ ಫಹಾದ್, "ತನ್ನ ಪರ ವಕಾಲತ್ತು ವಹಿಸಲು ಭಾರತೀಯ ವಕೀಲರು ಬೇಡ. ಅವರಲ್ಲಿ ತನಗೆ ನಂಬಿಕೆಯಿಲ್ಲ. ಈ ನಿಟ್ಟಿನಲ್ಲಿ ಪಾಕ್ ವಕೀಲರ ನೇಮಕಕ್ಕೆ ಅವಕಾಶ ಮಾಡಿಕೊಡಬೇಕು" ಎಂದು ಮನವಿ ಮಾಡಿದ್ದಾನೆ.

ಆದರೆ ಆತನ ಹೇಳಿಕೆಯನ್ನು ತಳ್ಳಿ ಹಾಕಿದ ನ್ಯಾಯಾಧೀಶರು, ಭಾರತೀಯ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಫಹಾದ್, ಈ ಪ್ರಕರಣದ ಕುರಿತು ತನ್ನ ಪರವಾದ ವಕಾಲತ್ತನ್ನು ತಾನೇ ಮಾಡುವುದಾಗಿ ತಿಳಿಸಿದ್ದಾನೆ.

ಉಳಿದಂತೆ ಇನ್ನೋರ್ವ ಶಂಕಿತ ಉಗ್ರ ಅಲಿ ಹುಸೇನ್, ಸ್ವತಃ ವಕೀಲರನ್ನು ನೇಮಿಸುವಷ್ಟು ಶಕ್ತಿ ನನಗಿಲ್ಲ. ಈ ನಿಟ್ಟಿನಲ್ಲಿ ತನ್ನ ಪರ ವಕಾಲತ್ತು ವಹಿಸಲು ವಕೀಲರನ್ನು ಕೋರ್ಟ್ ನೇಮಿಸಲಿ ಎಂದು ಹೇಳಿದ್ದಾನೆ.

ಇದೇ ವೇಳೆ ಬಂಧಿಸಲಾಗಿರುವ ಶಂಕಿತ ಉಗ್ರರ ಆರೋಪ ಪಟ್ಟಿಯನ್ನು ಓದಿ ಹೇಳಲಾಯಿತು. ಈ ಸಂದರ್ಭದಲ್ಲಿಯೂ ಉಗ್ರರು ಈ ಬಗ್ಗೆ ತಕರಾರು ಎತ್ತಿದರು. ಈ ಪಟ್ಟಿಯಲ್ಲಿ ವಿಚಾರಗಳು ತಮಗೆ ಅರ್ಥವಾಗುತ್ತಿಲ್ಲ. ಇದನ್ನು ಇಂಗ್ಲಿಷ್‌‌ಗೆ ತರ್ಜುಮೆ ಮಾಡಿ ಓದಿಸಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ.
ಮತ್ತಷ್ಟು
ಸರ್ಕಾರಿ ಗೌರವದೊಂದಿಗೆ ಶ್ರೀಕಂಠಪ್ಪ ಅಂತ್ಯಕ್ರಿಯೆ
ಭಯೋತ್ಪಾದನೆ ನಿಗ್ರಹಕ್ಕೆ ಒತ್ತು: ಯಡಿಯೂರಪ್ಪ
ಮಂಗಳೂರು: ಲಾಠಿ ಪ್ರಹಾರಕ್ಕೆ ಕಾಂಗ್ರೆಸ್ ಖಂಡನೆ
ಬೆಂಗಳೂರು: 9.5 ಕೋಟಿ ಹವಾಲ ಹಣ ವಶ
ಬೆಂಗಳೂರು: 36ಲಕ್ಷ ರೂ. ದೋಚಿ ಪರಾರಿ
ಜೆಡಿಎಸ್ ಕ್ಷೇತ್ರಗಳತ್ತ ಸರ್ಕಾರ ನಿರ್ಲಕ್ಷ್ಯ: ರೇವಣ್ಣ