ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಾಡಿನಾದ್ಯಂತ ನಾಗರಪಂಚಮಿ ಸಂಭ್ರಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಡಿನಾದ್ಯಂತ ನಾಗರಪಂಚಮಿ ಸಂಭ್ರಮ
ನಾಗರಪಂಚಮಿ ನಾಡಿಗೆ ದೊಡ್ಡದು' ಎಂಬಂತೆ ಬುಧವಾರದಂದು ನಾಡಿನಾದ್ಯಂತ ನಾಗರ ಪಂಚಮಿ ಸಂಭ್ರಮಾಚರಣೆಯಲ್ಲಿದೆ.

ಇಂದು ಬೆಳಿಗ್ಗೆನಿಂದಲೇ ನಾಡಿನ ನಾಗದೇವಾಲಯಗಳಿಗೆ ಜನ ತಂಡೋಪತಂಡವಾಗಿ ತೆರಳಿ, ಹುತ್ತಕ್ಕೆ ಹಾಲೆರೆದು ಪೂಜೆ -ಪುನಸ್ಕಾರ ಸಲ್ಲಿಸಿದರು. ಶ್ರಾವಣ ಮಾಸದ ಮೊದಲ ಹಬ್ಬ ಎನಿಸಿಕೊಂಡ ನಾಗರಪಂಚಮಿ ಸಂಭ್ರಮ ಎಲ್ಲೆಡೆಯಲ್ಲಿ ಕಂಡು ಬಂತು.

ಬೆಂಗಳೂರು, ಮಂಗಳೂರು, ಕುಕ್ಕೆಸುಬ್ರಹ್ಮಣ್ಯ ಸೇರಿದಂತೆ ನಾಡಿನ ಪ್ರಮುಖ ದೇವಾಲಯಗಳಲ್ಲಿ ಜನರು ತಮ್ಮ ಹರಕೆಯನ್ನು ಸಲ್ಲಿಸಿ, ಹಬ್ಬವನ್ನು ಆಚರಿಸಿದರು.

ವಿಶಿಷ್ಟ ರೀತಿಯಲ್ಲಿ ಹಬ್ಬದ ಆಚರಣೆ: ದಿಟ ನಾಗರ ಕಂಡರೆ ಹೊಡೆ, ಹೊಡೆ ಎಂಬ ಜನ ಕಲ್ಲ ನಾಗರ ಕಂಡರೆ ಹಾಲೆರೆಯುವರಯ್ಯ ಎಂಬ ಶರಣರ ವಚನದಂತೆ ಜನ ತಮ್ಮ ಮೌಢ್ಯವನ್ನು ತೋರ್ಪಡಿಸುವ ವಿರುದ್ಧ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು ಆಕ್ರೋಶ ವ್ಯಕ್ತಪಡಿಸಿ, ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಕಲ್ಲ ನಾಗರಕ್ಕೆ, ಹುತ್ತಕ್ಕೆ ಹಾಲೆರೆಯುವುದು ಮೌಢ್ಯದ ಪರಮಾವಧಿ ಎಂದು ಟೀಕಿಸಿದ ಅವರು,ನಾಗರಪಂಚಮಿ ದಿನದಂದು ಅವರು ನಿರಾಶ್ರಿತ ಮಕ್ಕಳಿಗೆ ಹಾಲು,ಬ್ರೆಡ್ ನೀಡುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಮತ್ತಷ್ಟು
ಜೆಡಿಎಸ್ ಬಿಟ್ಟು ಹೋಗಲ್ಲ: ಚನ್ನಿಗಪ್ಪ
ಸ್ವಯಂ ವಾದ ಮಂಡಿಸುವೆನೆಂದ ಉಗ್ರ ಫಹಾದ್
ಸರ್ಕಾರಿ ಗೌರವದೊಂದಿಗೆ ಶ್ರೀಕಂಠಪ್ಪ ಅಂತ್ಯಕ್ರಿಯೆ
ಭಯೋತ್ಪಾದನೆ ನಿಗ್ರಹಕ್ಕೆ ಒತ್ತು: ಯಡಿಯೂರಪ್ಪ
ಮಂಗಳೂರು: ಲಾಠಿ ಪ್ರಹಾರಕ್ಕೆ ಕಾಂಗ್ರೆಸ್ ಖಂಡನೆ
ಬೆಂಗಳೂರು: 9.5 ಕೋಟಿ ಹವಾಲ ಹಣ ವಶ