ಚಿಕ್ಕಮಗಳೂರಿನ ಶೃಂಗೇರಿ ಬಳಿ ನಕ್ಸಲೀಯರ ತಂಡವೊಂದು ವ್ಯಾಪಾರಿಯೊಬ್ಬರ ಮನೆಗೆ ದಾಳಿ ನಡೆಸಿ ದರೋಡೆ ನಡೆಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸುಮಾರು 12ಜನರ ಶಸ್ತ್ರಸಜ್ಜಿತ ನಕ್ಸಲೀಯ ತಂಡ ಮಾತುವಳ್ಳಿ ವ್ಯಾಪಾರಿ ಸತೀಶ್ ಎಂಬವರ ಮನೆಗೆ ದಾಳಿ ನಡೆಸಿ, ಸಿಂಗಲ್ ಬ್ಯಾರೆಲ್ ಗನ್ ಹಾಗೂ 27ಸಾವಿರ ರೂ.ನಗದನ್ನು ಲೂಟಿಗೈದು ಪರಾರಿಯಾಗಿದೆ.
ಶೃಂಗೇರಿ, ಆಗುಂಬೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಇತ್ತೀಚೆಗೆ ನಕ್ಸಲೀಯರ ಚಟುವಟಿಕೆ ತೀವ್ರಗೊಂಡಿರುವ ಬೆನ್ನಲ್ಲೇ, ಮತ್ತೊಮ್ಮೆ ನಕ್ಸಲ್ ತಂಡ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದೆ.
ನಕ್ಸಲೀಯರಿಂದ ಲೂಟಿ ನಡೆದಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸ್ ತಂಡ ನಕ್ಸಲೀಯರ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
|