ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೀದರ್: ಅಕ್ರಮ ಶಸ್ತ್ರಾಸ್ತ್ರ ವಶ- ನಾಲ್ವರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೀದರ್: ಅಕ್ರಮ ಶಸ್ತ್ರಾಸ್ತ್ರ ವಶ- ನಾಲ್ವರ ಬಂಧನ
ಇಲ್ಲಿನ ಹುಮ್ನಾಬಾದ್‌ನಲ್ಲಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 60 ಲಕ್ಷ ರೂ. ಮೌಲ್ಯದ ರಾಸಾಯನಿಕ ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಸುಳಿವಿನ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವಿಶೇಷ ತಂಡ ಹಾಗೂ ಹುಮ್ನಾಬಾದ್ ಪೊಲೀಸರು ಜಂಟಿಯಾಗಿ ಜಿಲ್ಲೆಯ ಹುಮ್ನಾಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿ 9ರಲ್ಲಿರುವ ಠಾಕೂರ್ ದಾಬಾ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ವಿವಿಧ ರಾಸಾಯನಿಕವುಳ್ಳ 50 ಬ್ಯಾರೆಲ್‌‌ ಹಾಗೂ 4 ಟ್ಯಾಂಕರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ್ ರಾವ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಸಾಯನಿಕದ ಜೊತೆಗೆ 5 ರೈಫಲ್, 2 ಪಿಸ್ತೂಲ್ ಹಾಗೂ 2 ತಲವಾರ್‌‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ದಾಬಾದಲ್ಲಿ ಈ ಹಿಂದೆಯೂ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ರಾಸಾಯನಿಕಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.

ಅಲ್ಲದೆ, ಈ ಹೆದ್ದಾರಿ ಹೈದ್ರಬಾದ್ ಹಾಗೂ ಪೂನಾಗಳಿಗೆ ಸಂಪರ್ಕ ಸೇತುವೆಯಾಗಿದ್ದರಿಂದ ಇಂತಹ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಯನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಶೃಂಗೇರಿ: ನಕ್ಸಲ್‌ ತಂಡದಿಂದ ದರೋಡೆ
ನಾಡಿನಾದ್ಯಂತ ನಾಗರಪಂಚಮಿ ಸಂಭ್ರಮ
ಜೆಡಿಎಸ್ ಬಿಟ್ಟು ಹೋಗಲ್ಲ: ಚನ್ನಿಗಪ್ಪ
ಸ್ವಯಂ ವಾದ ಮಂಡಿಸುವೆನೆಂದ ಉಗ್ರ ಫಹಾದ್
ಸರ್ಕಾರಿ ಗೌರವದೊಂದಿಗೆ ಶ್ರೀಕಂಠಪ್ಪ ಅಂತ್ಯಕ್ರಿಯೆ
ಭಯೋತ್ಪಾದನೆ ನಿಗ್ರಹಕ್ಕೆ ಒತ್ತು: ಯಡಿಯೂರಪ್ಪ