ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆರೋಗ್ಯ ಕವಚ: 150 ಆಂಬ್ಯುಲನ್ಸ್ ಖರೀದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರೋಗ್ಯ ಕವಚ: 150 ಆಂಬ್ಯುಲನ್ಸ್ ಖರೀದಿ
ಆರೋಗ್ಯ ಕವಚ ಯೋಜನೆ ಅನುಷ್ಠಾನಕ್ಕೆ 150 ಆಂಬ್ಯುಲನ್ಸ್‌ಗಳನ್ನು ಖರೀದಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಈ ಯೋಜನೆಗಾಗಿ 217 ಆಂಬ್ಯುಲನ್ಸ್ ಖರೀದಿಗೆ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ 10 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.

ಅಲ್ಲದೆ, ಭಾಗ್ಯಲಕ್ಷ್ಮಿ ಯೋಜನೆಯನ್ನು 10 ರಿಂದ 20 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದು ಆಗಸ್ಟ್ ಒಂದರಿಂದ ಜಾರಿಗೆ ಬರಲಿದೆ. ಅಂತೆಯೇ, ಮಳೆ ಆಧಾರಿತ ಕೃಷಿಕರಿಗೆ 1 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಅವರು ಹೇಳಿದರು.

ನಿವೃತ್ತ ಕೆಎಎಸ್ ಅಧಿಕಾರಿಗಳ ಸೇವೆ ಮುಂದುವರಿಸಲಾಗುವುದು. ಹಾಗೆಯೇ ಅವರನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುವುದು ಎಂದು ತಿಳಿಸಿದ ಅವರು, ಬಜೆಟ್ ಅನುಷ್ಠಾನಕ್ಕೆ 8 ಸಚಿವರ ಉಪಸಮಿತಿ ರಚಿಸಲಾಗುವುದು ಎಂದು ವಿವರಣೆ ನೀಡಿದರು.
ಮತ್ತಷ್ಟು
ಬಿಐಎಎಲ್‌ ಅವ್ಯವಸ್ಥೆ ಪರಿಶೀಲನೆಗೆ ಸಮಿತಿ: ಕಟ್ಟಾ
ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ
ಮತ್ತೆ ಲೋಡ್‌ ಶೆಡ್ಡಿಂಗ್‌‌ ಜಾರಿ
ಕೆಪಿಸಿಸಿ ಅಧ್ಯಕ್ಷಗಾದಿ ಆಯ್ಕೆಯಲ್ಲಿ ವಿಳಂಬ
ಕೋಕಾ ಜಾರಿ - ಕೇಂದ್ರದೊಂದಿಗೆ ಚರ್ಚೆ: ಸಿಎಂ
ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿ ಯಥಾಸ್ಥಿತಿ: ಕಾಗೇರಿ