ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಾಯುಕ್ತ ದಾಳಿ: ಕೋಟ್ಯಂತರ ರೂ.ಆಸ್ತಿ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಾಯುಕ್ತ ದಾಳಿ: ಕೋಟ್ಯಂತರ ರೂ.ಆಸ್ತಿ ಪತ್ತೆ
ರಾಜ್ಯದ ವಿವಿಧೆಡೆ ಲೋಕಾಯುಕ್ತರು ಗುರುವಾರ ಬೆಳಿಗ್ಗೆ 5 ಪ್ರಮುಖ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಆಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

ಇದರಂತೆ ಧಾರವಾಡದಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಕೃಷ್ಣಪ್ಪ ಅವರ ಆಸ್ತಿ 2,59, 40,000 ರೂ.ಗಳಾಗಿವೆ. ಮೈಸೂರಿನಲ್ಲಿ ವಾಣಿಜ್ಯ ಕಾಂಪ್ಲೆಕ್ಸ್, ಕುವೆಂಪು ನಗರದಲ್ಲೊಂದು ಬಂಗಲೆ ಸೇರಿದಂತೆ ಎಲ್ಲಾ ಆಸ್ತಿ ಪಾಸ್ತಿಗಳು ಪತ್ತೆಯಾಗಿವೆ.

ಅಲ್ಲದೆ, ಚಿಕ್ಕಮಗಳೂರಿನ ಆರ್ಎಫ್ಓ ಆಗಿರುವ ಖಾಜಾ ಮೊಹಿದ್ದೀನ್ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ಪತ್ತೆಯಾಗಿದೆ. ಅಂತೆಯೇ, ಬಿಜಾಪುರ, ಧಾರವಾಡದಲ್ಲಿ ಭಾರಿ ಬಂಗಲೆ, ಸ್ವ-ಗ್ರಾಮ ಬರಡೋಲ್‌‌ನಲ್ಲಿ ಬಂಗಲೆಯನ್ನು ಹೊಂದಿರುವ ಹಿರಿಯ ಪೊಲೀಸ್ ಅಧಿಕಾರಿಗಳಾಗಿರುವ ಬಿ.ಟಿ. ಚೌವ್ಹಾಣ್ ಅವರ ಒಟ್ಟು ಆಸ್ತಿ ವಿವರ 42,19,978 ರೂ.ಗಳಾಗಿವೆ.

ಇದೇ ವೇಳೆ ದಾವಣಗೆರೆಯ ಆರ್‌‌ಟಿಒ ಆಗಿರುವ ಜಿ. ತೆಂಬದ್ ಅವರ ಒಟ್ಟು ಆಸ್ತಿ ವಿವರ 1,37,40,000 ರೂ.ಗಳಾಗಿದೆ. ಇದರಲ್ಲಿ ದಾವಣಗೆರೆಯಲ್ಲಿ ದೊಡ್ಡ ಬಂಗಲೆ, ಜಗಲೂರು ಗ್ರಾಮದಲ್ಲಿ 34 ಎಕರೆ ಆಸ್ತಿ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಈ ಮಧ್ಯೆ ಹಿರಿಯ ಪೊಲೀಸ್ ಅಧಿಕಾರಿ ಚೌವ್ಹಾಣ್ ಅವರು ಲೋಕಾಯುಕ್ತರು ಮನೆ ಮೇಲೆ ದಾಳಿ ನಡೆಸುತ್ತಿದ್ದಂತೆ ಇಲ್ಲಿಂದ ಪಲಾಯನಗೈದಿದ್ದಾರೆ.
ಮತ್ತಷ್ಟು
ಗಣಿ ಧಣಿಗಳಿಗೆ ಮಣೆ, ರೈತರಿಗೆ ಕಂಬಿ: ವಾಟಾಳ್
ವಿದ್ಯುತ್‌‌ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ: ಜೈರಾಮ್
ಆರೋಗ್ಯ ಕವಚ: 150 ಆಂಬ್ಯುಲನ್ಸ್ ಖರೀದಿ
ಬಿಐಎಎಲ್‌ ಅವ್ಯವಸ್ಥೆ ಪರಿಶೀಲನೆಗೆ ಸಮಿತಿ: ಕಟ್ಟಾ
ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ
ಮತ್ತೆ ಲೋಡ್‌ ಶೆಡ್ಡಿಂಗ್‌‌ ಜಾರಿ