ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸರಣಿ ಸ್ಫೋಟ: ತನಿಖೆ ಚುರುಕು-ಪ್ರಗತಿ ಶೂನ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಣಿ ಸ್ಫೋಟ: ತನಿಖೆ ಚುರುಕು-ಪ್ರಗತಿ ಶೂನ್ಯ
ರಾಜಧಾನಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿ 15ದಿನಗಳಾಗುತ್ತಾ ಬಂದಿದೆ. ಆದರೆ ಸ್ಫೋಟದ ಕುರಿತು ಸುಳಿವು ಇನ್ನೂ ಸಿಕ್ಕಿಲ್ಲ. ಕಳೆದ ತಿಂಗಳ 25ರಂದು ಮಧ್ಯಾಹ್ನ ನಡೆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಮಾತ್ರ ಶೂನ್ಯ.

ರಾಜ್ಯದ ವಿವಿಧೆಡೆಗಳಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ, ದೂರವಾಣಿ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಂದ ಕರೆಗಳ ಪಟ್ಟಿಯನ್ನು ಈಗಾಗಲೇ ಪಡೆದುಕೊಂಡು ತನಿಖೆಯನ್ನು ಚುರುಕುಗೊಳಿಸುತ್ತಿದ್ದಾರೆ.

ಆದರೆ ಇದುವರೆಗೆ ಯಾವುದೇ ಮಹತ್ವದ ಮಾಹಿತಿ ಪೊಲೀಸರಿಗೆ ದೊರೆತಿಲ್ಲ. ಈ ಮಧ್ಯೆ ಸ್ವಾತಂತ್ರ್ಯ ದಿನಾಚರಣೆಯೂ ಸಮೀಪಿಸುತ್ತಿರುವುದರಿಂದ ಪೊಲೀಸರು ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಪ್ರಯಾಣಿಕರನ್ನು ಭೀತಿಗೊಡ್ಡಿದ ಬ್ಯಾಗ್:

ಈ ಮಧ್ಯೆ ಗುರುವಾರ ನಗರದ ಬಿಎಂಟಿಸಿ ಬಸ್‌ನಲ್ಲಿ ಬಾಂಬ್ ಇರುವುದಾಗಿ ಶಂಕೆಗೊಂಡ ಪ್ರಯಾಣಿಕರು ಭಯಭೀತರಾಗಿರುವ ಘಟನೆ ನಗರದ ನಗರದ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಸಿಟಿ ಮಾರ್ಕೆಟ್‌‌ನಿಂದ ಹೊರಟ ಬಸ್‌‌ನ ಸೀಟ್ ಕೆಳಗೆ ಬ್ಯಾಗ್‌‌ವೊಂದರಲ್ಲಿ ವೈರ್ ಕಾಣುತ್ತಿತ್ತು. ಅದನ್ನು ಕಂಡ ಕೆಲ ಪ್ರಯಾಣಿಕರು ಅದು ಬಾಂಬ್ ಇರಬಹುದೆಂದು ಹೆದರಿದ್ದರು.

ಬ್ಯಾಗ್ ಯಾರಿಗೂ ಸೇರಿದ್ದಲ್ಲ ಎಂದು ತಿಳಿದ ಕಂಡಕ್ಟರ್ ಗಾಬರಿಗೊಂಡು ಬಸ್ ಅನ್ನು ಕೆ.ಆರ್.ಪುರ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಕೂಡಲೇ ತನಿಖೆ ನಡೆಸಿದ ಪೊಲೀಸರು ಅದರಲ್ಲಿ ಹ್ಯಾಂಡ್ ಡ್ರಿಲ್ಲಿಂಗ್ ಇರುವುದನ್ನು ಖಚಿತಪಡಿಸಿಕೊಂಡರು. ಇದರಿಂದ ಆತಂಕಗೊಂಡಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಯಿತು.
ಮತ್ತಷ್ಟು
ಬಜೆಟ್‌‌: ಯೋಜನೆ ಅನುಷ್ಠಾನಕ್ಕೆ ಸಿಎಂ ತಾಕೀತು
ಲೋಕಾಯುಕ್ತ ದಾಳಿ: ಕೋಟ್ಯಂತರ ರೂ.ಆಸ್ತಿ ಪತ್ತೆ
ಗಣಿ ಧಣಿಗಳಿಗೆ ಮಣೆ, ರೈತರಿಗೆ ಕಂಬಿ: ವಾಟಾಳ್
ವಿದ್ಯುತ್‌‌ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ: ಜೈರಾಮ್
ಆರೋಗ್ಯ ಕವಚ: 150 ಆಂಬ್ಯುಲನ್ಸ್ ಖರೀದಿ
ಬಿಐಎಎಲ್‌ ಅವ್ಯವಸ್ಥೆ ಪರಿಶೀಲನೆಗೆ ಸಮಿತಿ: ಕಟ್ಟಾ